ಕೊಲ್ಕತ್ತಾದ ಕಲಾತ್ಮಕ ಶ್ರೀಮಂತಿಕೆಯನ್ನ ಇನ್ನಷ್ಟು ವೈಭವೀಕರಿಸಲು ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಗರದಲ್ಲಿ ಆರ್ಟ್ ಗ್ಯಾಲರಿಯನ್ನ ಪ್ರಾರಂಭಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜನ್ವೀರ್ ಸಿಂಗ್ ಕಪೂರ್ ಮಾಹಿತಿ ನೀಡಿದ್ರು.
ಕೊಲ್ಕತ್ತಾದ ಸಾರಿಗೆ ನಿಗಮ ನಿರ್ಮಿಸಿದ ಈ ಆರ್ಟ್ ಗ್ಯಾಲರಿಯನ್ನ ನೋಡೋಕೆ ನೀವು ಆ ಸ್ಥಳಕ್ಕೆ ಹೋಗಬೇಕು ಎಂದೇನಿಲ್ಲ. ವಾಹನ ಮಾದರಿಯಲ್ಲಿರುವ ಈ ಆರ್ಟ್ ಗ್ಯಾಲರಿ ಎಲ್ಲಿಗೆ ಬೇಕಿದ್ದರೂ ಚಲಿಸಬಲ್ಲದು. ಪ್ರತಿದಿನ ಇಲ್ಲವೇ ಪಯಾರ್ಯ ದಿನಗಳಂತೆ ಈ ಟ್ರ್ಯಾಮ್ ಇಡೀ ನಗರದಲ್ಲಿ ಪ್ರಯಾಣ ಬೆಳೆಸಲಿದೆ.
ತಮ್ಮ ಕಲಾಕೃತಿಗಳ ಪ್ರದರ್ಶನಕ್ಕೆ ಈ ಗಾಡಿಯನ್ನ ಬಳಸಲಿಚ್ಚಿಸುವವರು ದಿನಕ್ಕೆ 3600 ರೂಪಾಯಿ ಪಾವತಿ ಮಾಡಬೇಕಾಗುತ್ತೆ. ಎರಡು ದಿನಕ್ಕಾದರೆ 6000 ಹಾಗೂ ಮೂರು ದಿನಕ್ಕೆ 8000 ರೂಪಾಯಿ ಹೀಗೆ ಮುಂದುವರಿದ್ರೆ ದಿನಕ್ಕೆ 1500 ರೂಪಾಯಿ ಶುಲ್ಕ ಹೆಚ್ಚಾಗುತ್ತೆ ಹೋಗುತ್ತದೆ.
ಯಾವುದೇ ಶಾಲೆ ಅಥವಾ ಕಾಲೇಜಿನ ವಿದ್ಯಾರ್ಥಿ ಕಲಾವಿದರು ಹಾಗೂ ಸಾಮಾಜಿಕ ಉದ್ದೇಶಕ್ಕಾಗಿ ಪ್ರದರ್ಶನ ನೀಡುವ ದತ್ತಿ ಸಂಸ್ಥೆಯ ಕಲಾವಿದರಿಗೆ ಶೇಕಡಾ 50ರಷ್ಟು ಶುಲ್ಕ ರಿಯಾಯಿತಿ ಇರಲಿದೆ.