ಕೋಲ್ಕತ್ತಾ: ಪಶ್ಚಿಮ ಬಂಗಾಳದ ಈ ಅಂಗಡಿಯಲ್ಲಿ ಸಿಗುವ ಒಂದು ಕಪ್ ಚಹಾ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗಿ ಹೋಗ್ತೀರಾ…ಸಾಮಾನ್ಯವಾಗಿ ಒಂದು ಕಪ್ ಚಹಾ ಬೆಲೆ 10 ರೂಪಾಯಿ, 12 ರೂಪಾಯಿ, ಇಲ್ಲ 20 ರೂಪಾಯಿ ಇರುತ್ತದೆ… ಹೆಚ್ಚು ಎಂದರೆ 100 ರೂಪಾಯಿ ಇರಬಹುದು ಆದರೆ ಕೋಲ್ಕತ್ತಾದ ಚಹಾ ಅಂಗಡಿಯೊಂದರಲ್ಲಿ ಒಂದು ಕಪ್ ಚಹಾ ಬೆಲೆ ಬರೋಬ್ಬರಿ 1000 ರೂಪಾಯಿ ಎಂದರೆ ನಂಬುತ್ತೀರಾ…? ನಂಬಲೇಬೇಕು.
ಬಂಗಾಳದ ಪಾರ್ಥಾ ಗಂಗೂಲಿಯವರ ಚಹಾ ಅಂಗಡಿಯಲ್ಲಿ ಒಂದು ಕಪ್ ಚಹಾ ಬೆಲೆ 1000 ರೂ. ವರೆಗೂ ಇದೆ. ಇಲ್ಲಿನ ಮುಕುಂದಾಪುರದ ಖಾಸಗಿ ಆಸ್ಪತ್ರೆ ಬಳಿ ಚಹಾ ಅಂಗಡಿ ತೆರೆದಿರುವ ಪಾರ್ಥಾ ವಿವಿಧ ಬಗೆಯ ಚಹಾ ಸೌಲಭ್ಯವನ್ನಿಟ್ಟಿದ್ದಾರೆ. ಗ್ರೀನ್ ಟೀ, ಶುಂಠಿ ಚಹಾ, ಏಲಕ್ಕಿ ಚಹಾ, ಲವಂಗದ ಚಹಾ, ಮಸ್ಕಟೆಲ್ ಚಹಾ ಹೀಗೆ ವಿವಿಧ ಟೀ ಇಲ್ಲಿ ಲಭ್ಯ.
ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಕುಟುಂಬ ಸದಸ್ಯರು; ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ
ಮಸ್ಕಟೆಲ್ ಚಹಾ ವಿಶ್ವದಲ್ಲಿ ಜನಪ್ರಿಯ ಚಹಾ ಆಗಿದ್ದು, ದೇಶದ ವಿವಿಧ ಭಾಗಗಳಿಂದ ಈ ಚಹಾ ಸೇವನೆಗೆಂದೇ ಇಲ್ಲಿಗೆ ಹಲವರು ಬರುತ್ತಾರೆ ಎಂಬುದು ವಿಶೇಷ. ಪಾರ್ಥಾ ಗಂಗೂಲಿಯವರ ಅಂಗಡಿಯಲ್ಲಿ ಒಂದು ಕಪ್ ಚಹಾ 12 ರೂಪಾಯಿಯಿಂದ 1000 ರೂ. ವರೆಗೂ ಮಾರಾಟವಾಗುತ್ತೆ ಎಂಬುದು ವಿಶೇಷ.