
ದೇಶದ ಪ್ರತಿಯೊಂದು ಮೂಲೆಯೂ ಸಹ ತನ್ನದೇ ಆದ ವಿಶಿಷ್ಟ ಖಾದ್ಯಗಳಿಗೆ ಫೇಮಸ್ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ ? ಕೋಲ್ಕತ್ತಾದ ಬೀದಿಗಳಲ್ಲಿ ಸಿಗುವ ಪುಲ್ಚಾ, ಕಾಟಿ ರೋಲ್ಗಳು, ಚೌಮೀನ್ಗಳು ದೇಶವಾಸಿಗಳಿಗೆ ಚೆನ್ನಾಗೇ ಪರಿಚಿತವಾಗಿವೆ.
ಪಶ್ಚಿಮ ಬಂಗಾಳದ ರಾಜಧಾನಿಯ ಸ್ಟೋರ್ ಒಂದು ಕಾಟಿ ರೋಲ್ ಅನ್ನು ಬೇರೊಂದು ಲೆವೆಲ್ಗೆ ಕೊಂಡೊಯ್ಯಲು ಮುಂದಾಗಿದೆ. ಜಗತ್ತಿನ ಅತಿ ದೊಡ್ಡ ಚಿಕನ್ ಹಾಗೂ ಮೊಟ್ಟೆಯ ರೋಲ್ಗಳನ್ನು ತಾನು ಉಣಬಡಿಸುವುದಾಗಿ ಈ ಸ್ಟೋರ್ ಹೇಳಿಕೊಂಡಿದೆ.
ʼಅನಕ್ಷರಸ್ಥʼರಿಗೂ ಈ ಬ್ಯಾಂಕ್ ನೀಡ್ತಿದೆ ಉದ್ಯೋಗಾವಕಾಶ
ಶೆಫ್ ಅಲಾದಿನ್ ಹೆಸರಿನ ಈ ರೆಸ್ಟೋರೆಂಟ್ನಲ್ಲಿ 349 ರೂ.ಗಳಿಗೆ ಸಿಗುವ ಈ ಚಿಕನ್ ಎಗ್ ರೋಲ್ನಲ್ಲಿ ಕೆಂಪು ಸಾಸ್, ಮಯೋನಿಸ್, ಈರುಳ್ಳಿ, ಎಲೆಕೋಸು, ಚಿಕನ್, ಮೊಟ್ಟೆ, ಟಾರ್ಟಿಲ್ಲಾಗಳೆಲ್ಲವೂ ಅಡಕವಾಗಿವೆ.
ಇನ್ಸ್ಟಾಗ್ರಾಂನ ಈಟ್ಮೇನಿಯಾ ಪುಟದಲ್ಲಿ ಈ ರೋಲ್ ಮಾಡುವ ವಿಡಿಯೋ ಶೇರ್ ಮಾಡಲಾಗಿದೆ. ಚಿಕನ್/ಮಟನ್ ಕೆಬಾಬ್ಗಳಲ್ಲದೇ ಸಸ್ಯಹಾರಿಗಳಿಗೆ ಪನೀರ್ ಟಿಕ್ಕಾ, ಮಿಶ್ರ ತರಕಾರಿಯ ಸ್ಟಫ್ಫಿಂಗ್ನ ಆಯ್ಕೆಯೂ ಸಹ ಈ ಸ್ಟೋರ್ ಕೊಡಮಾಡಿದೆ.
23-26 ಇಂಚು ಉದ್ದ ಇರುವ ಈ ರೋಲ್ ಅನ್ನು ಒಬ್ಬರೇ ತಿಂದು ಮುಗಿಸುವುದು ಅಸಾಧ್ಯ ಎಂದೇ ಹೇಳಬಹುದು. ನೀವೇನಾದರೂ ಈ ರೋಲ್ ತಿನ್ನಬೇಕಾದಲ್ಲಿ ಗೆಳೆಯರನ್ನೂ ಜೊತೆಯಲ್ಲಿ ಕೊಂಡೊಯ್ಯಬೇಕು.