
ಆರ್ಡರ್ ಮಾಡಿದ್ದು ಒಂದು ಐಟಮ್ ಆದರೆ ಡೆಲಿವರಿ ಆಗಿದ್ದು ಮತ್ತೊಂದು ಐಟಮ್ ಎನ್ನುವಂಥ ಎರಡು ನಿದರ್ಶನಗಳನ್ನು ಅಮೆಜಾನ್ ಕಳೆದ ಒಂದು ವಾರದೊಳಗೆ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಕೋಲ್ಕತ್ತಾದ ಸುದೀರ್ಥೋ ದಾಸ್ ಎಂಬುವವರು ಆನ್ಲೈನ್ ಮೂಲಕ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಭಗವದ್ಗೀತೆಯ ಪುಸ್ತಕವೊಂದನ್ನು ಅಮೆಜಾನ್ ಡೆಲಿವರಿ ಮಾಡಿದೆ. ತಮ್ಮ ಈ ಅನುಭವವನ್ನು ದಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ವಾರ 300 ರೂ.ಗಳ ಸ್ಕಿನ್ ಲೋಷನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ 19,000 ರೂ. ಮೌಲ್ಯದ ಬೋಸ್ ಹೆಡ್ ಫೋನ್‌ಗಳು ಡೆಲಿವರ್ ಆಗಿದ್ದು ಸಹ ಸದ್ದು ಮಾಡಿತ್ತು.
https://www.facebook.com/permalink.php?story_fbid=280887646436597&id=100035460923174