ಮಕ್ಕಳ ಬರ್ತಡೇ ಅಂದ್ಮೇಲೆ ಕೇಳಬೇಕಾ ? ಹೊಸ ಬಟ್ಟೆಬರೆ, ಒಡವೆ-ವಸ್ತ್ರ, ಆಟದ ಸಾಮಾನು ಖರೀದಿ ಜೋರಾಗೇ ನಡೆಯತ್ತೆ.
ಆದರೆ, ಈಗ ಕೊರೋನಾ ಪರಿಣಾಮದಿಂದಾಗಿ ದೊಡ್ಡ ಮಟ್ಟದ ಆಚರಣೆ ಇಲ್ಲ. ಕೇಕ್ ಕತ್ತರಿಸಿ ಹಂಚುವ ಸಂಪ್ರದಾಯವಂತೂ ಸಂಪೂರ್ಣ ಬಂದ್. ಎಲ್ಲವೂ ಆನ್ ಲೈನ್ ಮಯ.
ಈ 11 ವರ್ಷದ ಮಗು ತನ್ನ ಹುಟ್ಟು ಹಬ್ಬಕ್ಕಾಗಿ ಅಂಗಡಿಗೆ ಕೊಂಡದ್ದೇನು ಗೊತ್ತೆ ? ಮಾಸ್ಕ್.
ಈಗಾಗಲೇ ಮಾರುಕಟ್ಟೆಯಲ್ಲಿ ತರಹೇವಾರಿ ಮಾಸ್ಕ್ ಗಳು ಬಂದಿದ್ದು, ನಮ್ಮ ಮುಖವನ್ನೇ ಹೋಲುವ, ಚರ್ಮದ ಬಣ್ಣದ ಮಾಸ್ಕ್ ಗಳು ಈಗ ಹಳೆಯ ವಿಷಯ. ಹೊಸ ವಿಷಯ ಏನಪ್ಪಾ ಅಂದರೆ, ಮಕ್ಕಳನ್ನು ಸೆಳೆಯಲು ಕಾರ್ಟೂನ್ ಚಿತ್ರಗಳನ್ನು ಮಾಸ್ಕ್ ಗಳ ಮೇಲೆ ಅಚ್ಚೊತ್ತಲಾಗಿದೆ.
ಕೋಲ್ಕತ್ತಾದ ಮಳಿಗೆಯೊಂದರಲ್ಲಿ ಬರ್ತಡೇ ಶಾಪಿಂಗ್ ಮಾಡಿದ 11 ವರ್ಷದ ಪೂನಂ ಜುಂಝುವಾಲಾ, ಟಾಮ್ ಅಂಡ್ ಜೆರ್ರಿ ಇರುವ ಮೂರು ಮಾಸ್ಕ್ ಗಳನ್ನು ಖರೀದಿಸಿದ್ದು, ಆನ್ ಲೈನ್ ಅಲ್ಲೇ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರೂ ನಾನೂ ಮಾಸ್ಕ್ ಹಾಕಿಕೊಳ್ಳುತ್ತೇನೆ. ಆಚರಣೆಗೆ ಬರುವ ಇನ್ನಿಬ್ಬರಿಗೂ ಉಡುಗೊರೆಯಾಗಿ ಕೊಡುತ್ತೇನೆ ಎನ್ನುತ್ತಾಳೆ ಈ ಪೋರಿ.
ಇಷ್ಟು ದಿನ ಒಂದೇ ಬಣ್ಣದ ಪ್ಲೈನ್ ಮಾಸ್ಕ್ ಗಳನ್ನು ಧರಿಸಿ ಮಕ್ಕಳಿಗೂ ಬೋರ್ ಆಗಿದೆ. ವರ್ಣರಂಜಿತವಾದ ಮಾಸ್ಕ್ ಬೇಕು ಎಂದು ಹಠ ಮಾಡುವುದರಿಂದ ಕೊಡಿಸುತ್ತೇವೆ ಎನ್ನುತ್ತಾರೆ ಪೋಷಕರು.