ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತಿ ವರ್ಷ ಈ ಹೊತ್ತಿಗೆಲ್ಲ ಅದ್ದೂರಿ ದುರ್ಗಾ ಪೂಜೆ ನಡೆಯಬೇಕಿತ್ತು. ಆದರೆ, ಈ ಬಾರಿ ಕೋವಿಡ್-19 ಅಲ್ಲಿ ಅದ್ದೂರಿ ನವರಾತ್ರಿ ಇಲ್ಲದಂತೆ ಮಾಡಿದೆ. ಇದರ ನಡುವೆಯೂ ಜನ ಸಂಭ್ರಮ ಬಿಟ್ಟಿಲ್ಲ. ಕೊಲ್ಕತ್ತಾದ ತಂಡವೊಂದು ಪಿಪಿಇ ಕಿಟ್ ಧರಿಸಿ ದಾಂಡಿಯಾ ಆಡಿದ ವಿಡಿಯೋ ಈಗ ವೈರಲ್ ಆಗಿದೆ.
ಕೋವಿಡ್ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಲು ಕೋಲ್ಕತ್ತಾದ ವಿವೇಕಾನಂದ ಸ್ಪೋರ್ಟಿಂಗ್ ಕ್ಲಬ್ ಎಂಬ ದಸರಾ ಕಮಿಟಿ ಸದಸ್ಯರು ಪಿಪಿಇ ಕೋಟ್, ಮಾಸ್ಕ್, ಗ್ಲಾಸ್ ಗಳನ್ನು ಧರಿಸಿ ವಿಶಿಷ್ಟ ರೀತಿಯಲ್ಲಿ ದಾಂಡಿಯಾ ಪ್ರದರ್ಶಿಸಿದರು.
“ಕೊಲ್ಕತ್ತಾ ದುರ್ಗಾ ಪೂಜೆ ಹಾಗೂ ದಾಂಡಿಯಾಕ್ಕೆ ಪ್ರಸಿದ್ಧವಾಗಿದೆ. ಈ ಸಮಯದಲ್ಲಿ ಜನ ಕೋವಿಡ್ ಸುರಕ್ಷತೆ ಮರೆಯದಿರಲಿ ಎಂಬ ಕಾರಣದಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸಿ ಪೆಂಡಾಲ್ ಗೆ ಆಗಮಿಸುವಂತೆ ಜನರಿಗೆ ಸೂಚಿಸಿದ್ದೇವೆ ಎಂದು ಪೂಜಾ ಸಮಿತಿ ಅಧ್ಯಕ್ಷ ಸಶಾವತ್ ಬಸು ತಿಳಿಸಿದ್ದಾರೆ.
ಕೊಲ್ಕತ್ತಾ ಹೈಕೋರ್ಟ್ ಸೂಚನೆಯಂತೆ ದುರ್ಗಾ ಪೂಜೆಯ ಪೆಂಡಾಲ್ ಸುತ್ತ ಬ್ಯಾರಿಕೇಡ್ ಮಾಡಿ ಬಫರ್ ಜೋನ್ ಎಂದು ಗುರುತಿಸಲಾಗಿದೆ. ಐದು ದಿನ ಅಲ್ಲಿ ದಾಂಡಿಯಾ ನೃತ್ಯ ಪ್ರದರ್ಶನ ನಡೆಯಲಿದೆ.