ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ.
ಇಲ್ಲಿನ ಕಾಳಿಘಾಟ್ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ ಅನಾಹುತದ ವಿರುದ್ಧ ಹೋರಾಡಲು ಬಂದಿದ್ದ ಸೌಮೆನ್ ಕಾಯಲ್, ಇದೇ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳೆದ ಒಂದು ತಿಂಗಳಿಂದ ತಾನು ಬೈಸಿಕಲ್ ಕದಿಯುತ್ತಿದ್ದದ್ದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಸೌಮೆನ್.
ಅಗ್ನಿ ಅನಾಹುತದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದ ವೇಳೆ ಪೊಲೀಸರು ಸೌಮೆನ್ನನ್ನು ಪತ್ತೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಅವಘಡದ ಜಾಗ ತಲುಪುವ ಮುನ್ನ ಸೌಮೆನ್ ಬಕೆಟ್ಗಳಲ್ಲಿ ನೀರು ತುಂಬಿಕೊಂಡು ಬೆಂಕಿ ನಂದಿಸುವ ಯತ್ನ ಮಾಡುತ್ತಿದ್ದ.
25 ವರ್ಷದ ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳೆದೊಂದು ತಿಂಗಳಿನಿಂದ 20,000-35,000 ರೂ.ಗಳ ನಡುವಿನ ಬೆಲೆಯ ನಾಲ್ಕು ಬೈಸಿಕಲ್ಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.