ಕೊಲ್ಕತ್ತಾ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಿಂದ 19 ರವರೆಗೆ ಕೊಲ್ಕತ್ತಾಕ್ಕೆ ವಿಮಾನಯಾನ ನಿಷೇಧಿಸಲಾಗಿದೆ.
ಅಹಮದಾಬಾದ್, ಚೆನ್ನೈ, ಪುಣೆ, ನಾಗಪುರ ಮೊದಲಾದ ನಗರಗಳಿಂದ ಕೊಲ್ಕತ್ತಾಕ್ಕೆ ಪ್ರಯಾಣಿಕರ ವಿಮಾನಗಳು ಬರುವಂತಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದ್ದು ಕೊರೊನಾ ಸೋಂಕು ತಡೆಗೆ ಜುಲೈ 6 ರಿಂದ 19ರವರೆಗೆ ವಿಮಾನಯಾನಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಮೇ 25 ರಿಂದ ಪ್ರಯಾಣಿಕರ ವಿಮಾನ ಪುನಾರಂಭವಾಗಿದ್ದು ಭಾರತದಲ್ಲಿ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ಮುಂದುವರೆದಿದೆ. ಕೊಲ್ಕತ್ತಾಕ್ಕೆ ಪ್ರಮುಖ ಮಹಾನಗರಗಳಿಂದ ಯಾವುದೇ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ ಎಂದು ಹೇಳಲಾಗಿದೆ.