ಕೊಲ್ಕತ್ತಾ: ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲೆಡೆ “ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ”, “ಮಾಸ್ಕ್ ಕಡ್ಡಾಯ” ಎಂಬ ಫಲಕಗಳು ಕಂಡು ಬರುತ್ತಿವೆ. ಬ್ಯಾಂಕ್ ಒಂದು ಮಾಸ್ಕ್ ಎಂದು ಬರೆಯುವ ಬದಲು ಮಾರ್ಕ್ಸ್ ಎಂದು ಬರೆದು ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕೊಲ್ಕತ್ತಾದ ಬ್ಯಾಂಕ್ ಆಫ್ ಇಂಡಿಯಾದ ಮೈಕಲ್ ನಗರ ಶಾಖೆಯ ಎದುರು ಬರೆದ ಫಲಕದ ಚಿತ್ರ ಟ್ವಿಟರ್ ನಲ್ಲಿ ಸದ್ದು ಮಾಡುತ್ತಿದೆ. “ಮಾರ್ಕ್ಸ್ ನಾ ಪೊರೆಯ್ ಬ್ಯಾಂಕ್ – ಇ ಪ್ರೊಬೇಶ್ ಕರೋಬ್ ನಾ”ಎಂದು ಬರೆಯಲಾಗಿದೆ “ಸ” ಬದಲು “ರ” ಅಕ್ಷರ ಬಳಸಿದ್ದು ಇಡೀ ಬರಹದ ಅರ್ಥವನ್ನೇ ಬದಲಾಯಿಸಿಬಿಟ್ಟಿದೆ. ಬಂಗಾಳಿಯಲ್ಲಿ ಪೊರೆಯ್ ಎಂಬುದು ಓದು ಹಾಗೂ ಧರಿಸು ಎಂಬ ಎರಡು ಅರ್ಥಗಳನ್ನು ಹೊಂದಿದ್ದು, ಹೀಗಾಗಿ (ಕಾರ್ಲ್) ಮಾರ್ಕ್ಸ್ ಓದಿಕೊಂಡಿರದವರಿಗೆ ಪ್ರವೇಶವಿಲ್ಲ ಎಂಬಂತೆ ಇದು ಪ್ರತಿಧ್ವನಿಸುತ್ತಿದೆ. ಸಂದಿಪ್ತೊ ದಾಸ್ ಗುಪ್ತಾ ಎಂಬುವವರು ಈ ಫೋಟೋ ಬಳಸಿ “ಇದು ಐತಿಹಾಸಿಕ ಅಪಭ್ರಂಶ” ಎಂದು ಬರೆದಿದ್ದಾರೆ. ಸಾಕಷ್ಟು ಜನರು ಈ ಫೋಟೋ ರೀ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
https://twitter.com/sandiptod/status/1281603270906175488?ref_src=twsrc%5Etfw%7Ctwcamp%5Etweetembed%7Ctwterm%5E1281603270906175488%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fkolkata-bank-got-spelling-of-mask-wrong-so-it-now-wants-everyone-to-read-marx-before-entering-2710957.html
https://twitter.com/sandiptod/status/1281603270906175488?ref_src=twsrc%5Etfw%7Ctwcamp%5Etweetembed%7Ctwterm%5E1281603479719628801%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fkolkata-bank-got-spelling-of-mask-wrong-so-it-now-wants-everyone-to-read-marx-before-entering-2710957.html