ಕೇರಳದ ಮೊಟ್ಟ ಮೊದಲ ತಾಯಿ ಎದೆ ಹಾಲಿನ ಬ್ಯಾಂಕ್ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ಏರ್ನಾಕುಲಂನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್ಗೆ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಚಾಲನೆ ನೀಡಲಿದ್ದಾರೆ.
ಕೊಚ್ಚಿ ರೋಟರಿ ಕ್ಲಬ್ನ ಸಹಕಾರದೊಂದಿಗೆ ಈ ಪ್ರಯತ್ನಕ್ಕೆ ಕೇರಳ ಸರ್ಕಾರ ಕೈ ಹಾಕಿದೆ. ತಾಯಿ ಹಾಲಿನಿಂದ ವಂಚಿತರಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಈ ತಾಯಿ ಹಾಲಿನ ಬ್ಯಾಂಕ್ ನೆರವಾಗಲಿದೆ.
ಕೇರಳದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ 3600 ಶಿಶುಗಳು ಜನಿಸುತ್ತವೆ. ಇದರಲ್ಲಿ 600 ರಿಂದ 1000 ಶಿಶುಗಳು ತಾಯಿ ಹಾಲಿನ ಕೊರತೆಯಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗುತ್ತವೆ.
ಅವಧಿಗೂ ಮುನ್ನವೇ ಜನಿಸಿದ ಮಕ್ಕಳು, ಮಕ್ಕಳಿಗೆ ಹಾಲುಣಿಸಲು ಸಾಧ್ಯವಾಗದ ತಾಯಂದಿರು, ವಿವಿಧ ಕಾರಣಗಳಿಂದಾಗಿ ಜನ್ಮ ಪಡೆದ ಬಳಿಕ ತಾಯಿಯಿಂದ ದೂರಾದ ಕಂದಮ್ಮಗಳು ಈ ಬ್ಯಾಂಕ್ನ ಸಹಾಯದಿಂದ ಎದೆ ಹಾಲನ್ನ ಪಡೆಯಬಹುದಾಗಿದೆ ಎಂದು ಕೊಚ್ಚಿಯ ರೋಟರಿ ಕಬ್ನ ಡಾ. ಪೌಲ್ ಹೇಳಿದ್ದಾರೆ. ಯಾವುದೇ ತಾಯಿಯಿಂದ ಸಂಗ್ರಹಿಸಲಾದ ಎದೆಹಾಲನ್ನ ಈ ಬ್ಯಾಂಕ್ನಲ್ಲಿ 6 ತಿಂಗಳುಗಳ ಕಾಲ ಸಂಗ್ರಹಿಸಿ ಇಡಬಹುದಾಗಿದೆ.