ಕೇರಳದ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಪ್ರದೇಶದಲ್ಲಿ ಗರ್ಭಿಣಿ ಆನೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಯಾಗಿದೆ.
ಗರ್ಭಿಣಿ ಆನೆಯ ದುರಂತ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಮಿತಿ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಆನೆಯನ್ನು ಹತ್ಯೆ ಮಾಡಿದವರ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಆಹಾರ ಅರಸಿ ಗ್ರಾಮಗಳಲ್ಲಿ ತಿರುಗಾಡುತ್ತಿದ್ದ ಗರ್ಭಿಣಿ ಆನೆಗೆ ಅನಾನಸ್ ನಲ್ಲಿ ಪಟಾಕಿ, ಸ್ಪೋಟಕವನ್ನು ಇಟ್ಟು ಕೊಡಲಾಗಿದೆ. ಅರಿಯದೇ ಈ ಹಣ್ಣನ್ನು ತಿಂದ ಸಂದರ್ಭದಲ್ಲಿ ಪಟಾಕಿ ಸ್ಪೋಟಿಸಿ ಆನೆಯ ಬಾಯಿ ನಾಲಗೆ ಛಿದ್ರವಾಗಿದೆ. ಗರ್ಭಿಣಿಯಾಗಿದ್ದ ಆನೆ ಸಹಿಸಲಾಗದ ನೋವು ತಾಳಲಾಗದೆ ನೀರಿನ ಹೊಂಡಕ್ಕೆ ಇಳಿದು ಅಲ್ಲೇ ನರಳಾಡಿ ಕೊನೆಯುಸಿರೆಳೆದಿದೆ.
ಗರ್ಭಿಣಿ ಆನೆಯ ದುರಂತ ಸಾವಿನ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಅನೇಕ ಸೆಲೆಬ್ರಿಟಿಗಳು ಆನೆಯ ದುರಂತ ಸಾವಿಗೆ ಕಂಬನಿ ಮಿಡಿದು ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಖ್ಯಾತ ಉದ್ಯಮಿ ರತನ್ ಟಾಟಾ, ನಟ ಅಕ್ಷಯ್ ಕುಮಾರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮನೇಕಾ ಗಾಂಧಿ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯು ಆನೆಯ ಸಾವಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇರಳ ವೈಲ್ಡ್ ಲೈಫ್ ಸಂಸ್ಥೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆನೆಯ ದುರಂತ ಸಾವಿಗೆ ಕಾರಣರಾದವರ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಪೊಲೀಸರು ಕೂಡ ಸಾವಿಗೆ ಕಾರಣರಾದವರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.