ಸಾಮಾನ್ಯವಾಗಿ ಬಸ್ ಹಿಂದೆ ಕಾರ್ ಅಥವಾ ಬೈಕ್‌ಗಳು ಹೋಗುತ್ತಿದ್ದರೆ ಓವರ್ ಟೇಕ್ ಮಾಡಿ ಮುಂದೆ ಸಾಗೋದನ್ನು ನೋಡಿದ್ದೇವೆ. ಮತ್ತೊಂದಿಷ್ಟು ಜನ ಬೇರೆ ವಾಹನಗಳಿಗೆ ಕಿರಿಕಿರಿ ಮಾಡಲೆಂದೇ ರಸ್ತೆ ಮಧ್ಯದಲ್ಲಿ ಹೋಗುತ್ತಿರೋದನ್ನೂ ನೋಡಿದ್ದೇವೆ. ಇಂತವರಿಗೆ ಎಷ್ಟು ಬಾರಿ ಬುದ್ದಿ ಹೇಳಿದರೂ ಬುದ್ದಿ ಕಲಿಯುವುದಿಲ್ಲ. ಇದೀಗ ಬುದ್ದಿ ಕಲಿಯದ ಬೈಕ್ ಸವಾರನಿಗೊಬ್ಬನಿಗೆ ಮೋಟಾರು ವಾಹನ ಇಲಾಖೆ ಬುದ್ದಿ ಕಲಿಸಿದೆ.
ಹೌದು, ಕಣ್ಣೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳಕ್ಕೆ ಸೇರಿದ ಸರ್ಕಾರಿ ಬಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಸವಾರನೊಬ್ಬ ಬಸ್‌ನ ಓವರ್‌ಟೇಕ್ ಮಾಡಿದ್ದಾನೆ. ಮುಂದೆ ಬಂದ ಬೈಕ್ ಸವಾರ ಹಾಗೆಯೇ ಹೋಗುವುದು ಬಿಟ್ಟು ಬಸ್‌ಗೆ ದಾರಿ ಕೊಡದೇ ರಸ್ತೆ ಮಧ್ಯದಲ್ಲಿಯೇ ಯದ್ವಾ ತದ್ವಾ ಓಡಿಸಿದ್ದಾನೆ. ಬಸ್ ಚಾಲಕ ಎಷ್ಟೇ ಹಾರ್ನ್ ಮಾಡಿದರೂ ತಲೆಕೆಡಿಸಿಕೊಳ್ಳದೇ ಮೊಂಡುತನ ಪ್ರದರ್ಶನ ಮಾಡಿದ್ದಾನೆ.
ಬಸ್‌ನಲ್ಲಿದ್ದ ಪ್ರಯಾಣಿಕರು ಈ ಚಾಲಕನ ಮೊಂಡಾಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಂತರ ಈ ವಿಡಿಯೋ ನೋಡಿದ ಮೋಟಾರು ವಾಹನ ಇಲಾಖೆ ಈತನ ಮನೆಗೆ ತೆರಳಿ ಬಾರೀ ಮೊತ್ತದ ದಂಡ ವಿಧಿಸಿದೆ. ಸುಮಾರು 10,500 ರೂಪಾಯಿ ದಂಡ ವಿಧಿಸುವ ಮೂಲಕ ಪಾಠ ಕಲಿಸಿದೆ. ಈ ರೀತಿ ಯದ್ವಾ ತದ್ವಾ ಗಾಡಿ ಓಡಿಸುವವರಿಗೆ ಇದೊಂದು ಪಾಠವೇ ಸರಿ.