ಮಹಿಳೆಯರಿಗೆ ತಿಂಗಳ ನೋವು ಎಂಬುದು ಸಹಿಸಲಾಗದ ವೇದನೆ. ಇದನ್ನು ಅನುಭವಿಸುವ ಅವರಿಗಷ್ಟೇ ಇದರ ಕಷ್ಟ ಗೊತ್ತು. ಹೀಗಾಗಿ ಮಹಿಳೆಯರಿಗೆ ತಿಂಗಳ ನೋವಿಗೆ ರಜೆ ನೀಡಬೇಕೆಂಬ ಮಾತು ಕೇಳಿ ಬರುತ್ತಲೇ ಇದೆ.
ಜೊತೆಗೆ ವಿದ್ಯಾರ್ಥಿನಿಯರಿಗೆ ಶಾಲೆಗಳಲ್ಲಿ ಮುಟ್ಟಿನ ರಜೆಯನ್ನು ಕಡ್ಡಾಯ ಮಾಡಬೇಕು ಅನ್ನೋ ಕೂಗು ಸಹ ಕೇಳಿ ಬರುತ್ತಿತ್ತು. ಆದ್ರೆ 105 ವರ್ಷಗಳ ಹಿಂದೆಯೇ ಕೇರಳದ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ನೀಡಲಾಗುತ್ತಿತ್ತು ಅನ್ನೋ ಬಗ್ಗೆ ದಾಖಲೆಗಳು ಇವೆ.
ಕೊಚ್ಚಿನ್ ನ ತಿರ್ಪುನಿಥುರಾ ಎಂಬಲ್ಲಿರುವ ಸರ್ಕಾರಿ ಶಾಲೆಯಲ್ಲಿ 1912ನೇ ಇಸ್ವಿಯಲ್ಲೇ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶವಿತ್ತು. ವಾರ್ಷಿಕ ಪರೀಕ್ಷೆ ಸಮಯದಲ್ಲಿ ಕೂಡ ಮುಟ್ಟಿನ ರಜೆ ನೀಡಲಾಗುತ್ತಿತ್ತು. ಅವರು ನಂತರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತಿತ್ತು.
ಶಾಲೆಯ ಮುಖ್ಯಸ್ಥರಾಗಿದ್ದ ಪಿ. ಭಾಸ್ಕರನುನ್ನಿ ಅವರು ಬರೆದಿರುವ ‘ಕೇರಳ ಇನ್ ದಿ 19 ಸೆಂಚುರಿ’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. 1988ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿತ್ತು.