ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ವಿಚಾರದಲ್ಲಿ ಪೊಲೀಸರ ಸಾಹಸ ಅಷ್ಟಿಷ್ಟಲ್ಲ, ಜನಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ.
ವಿವಿಧ ರಾಜ್ಯಗಳ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಜನಜಾಗೃತಿ ಮೂಡಿಸಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಕೇರಳ ಪೊಲೀಸರ ಕೋವಿಡ್ ಡ್ಯಾನ್ಸ್ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊರೊನಾ ಕರ್ಫ್ಯೂ: ದೇವರ ಉತ್ಸವಕ್ಕೆ ಒಪ್ಪದ ಅರ್ಚಕನನ್ನೇ ಹಿಡಿದು ಥಳಿಸಿದ ಭಕ್ತರು
ತಮಿಳಿನ ಸೂಪರ್ ಡೂಪರ್ ಹಿಟ್ ಆದ ‘ಕೂಕ್ಕೂ ಕುಕ್ಕೂ ಕಂಬಳಿ ಪೂಚಿ…..’ ಹಾಡಿನ ಹಿನ್ನೆಲೆ ಇಟ್ಟುಕೊಂಡು ಮಲೆಯಾಳದಲ್ಲಿ ಕೋವಿಡ್ ಕುರಿತ ಜಾಗೃತಿ ಸಂದೇಶ ನೀಡುವ ಸಾಹಿತ್ಯ ಬಳಸಿ ಜಾಗೃತಿ ವಿಡಿಯೋ ಮಾಡಲಾಗಿದೆ.
ಒಂಬತ್ತು ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿ ನೃತ್ಯಮಾಡಿದ್ದು ಗಮನ ಸೆಳೆಯುತ್ತಿದೆ. ಮಾಸ್ಕ್, ಸಾಮಾಜಿಕ ಅಂತರದ ಅಗತ್ಯತೆಯನ್ನು ನೃತ್ಯದ ಮೂಲಕ ಎಚ್ಚರಿಸುತ್ತಾರೆ.
ಸಾಂಕ್ರಾಮಿಕದ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ. ಕೇರಳ ಪೊಲೀಸರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ ಎಂದು ಸಂದೇಶವನ್ನೂ ನೀಡಿದ್ದಾರೆ.
https://www.facebook.com/watch/?v=243100587552609&t=0