alex Certify ಅಂತರ್​ಜಾತಿ ವಿವಾಹ ಪ್ರೋತ್ಸಾಹಿಸಲೆಂದೇ ಮ್ಯಾಟ್ರಿಮೋನಿ ಖಾತೆ ಆರಂಭ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರ್​ಜಾತಿ ವಿವಾಹ ಪ್ರೋತ್ಸಾಹಿಸಲೆಂದೇ ಮ್ಯಾಟ್ರಿಮೋನಿ ಖಾತೆ ಆರಂಭ..!

ಜಾತಿ ಹಾಗೂ ಧರ್ಮದ ವಿಚಾರಕ್ಕೆ ಬಂದರೆ ಮದುವೆ ಮನೆ ಕೂಡ ಮಸಣದ ಮನೆಯಾಗಿ ಬಿಡುತ್ತೆ. ಇಂತಹ ಎಷ್ಟೋ ಉದಾಹರಣೆಗಳನ್ನೂ ನಾವು ಕಂಡಿದ್ದೇವೆ. ಆದರೆ ಈ ಎಲ್ಲ ಸವಾಲುಗಳನ್ನ ಎದುರಿಸಿ ನಿಂತಿರುವ ಕೇರಳದ ವ್ಯಕ್ತಿಯೊಬ್ಬರು ಫೇಸ್​ಬುಕ್​ನಲ್ಲಿ ಸೆಕ್ಯೂಲರ್​ ಮ್ಯಾರೇಜ್​ ಮ್ಯಾಟ್ರಿಮೋನಿ ಎಂಬ ಖಾತೆಯನ್ನ ರಚಿಸಿದ್ದಾರೆ. ಜಾತಿ ಹಾಗೂ ಧರ್ಮಗಳನ್ನ ಮೀರಿ ಮದುವೆಯಾಗಲಿಚ್ಚಿಸುವ ಜೋಡಿಗೆ ವಿಶೇಷ ವಿವಾಹ ಕಾಯ್ದೆಯಡಿ ವೇದಿಕೆ ಒದಗಿಸಲಾಗ್ತಿದೆ.

2014ರಲ್ಲಿ ಆರಂಭವಾದ ಮಥಮಿಲ್ಲತಾ ಜೀವತಂ​ (ಧರ್ಮವಿಲ್ಲದ ಜೀವನ) ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಅಂತರ್ಜಾತಿ, ಅಂತರ್​ ಧರ್ಮೀಯ ವಿವಾಹವಾದವರ ಜೀವನದ ಕತೆಯನ್ನ ಶೇರ್​ ಮಾಡಲಾಗುತ್ತೆ. ಅಂತರ್​ ಧರ್ಮೀಯ ಹಾಗೂ ಅಂತರ್​ಜಾತಿ ವಿವಾಹವನ್ನ ಪ್ರೋತ್ಸಾಹಿಸಲು ಈ ಫೇಸ್​ಬುಕ್​ ಪೇಜ್​ನ್ನು ರಚಿಸಲಾಗಿದೆ.

2014ರಲ್ಲಿ ಸೆಕ್ಯೂಲರ್ ಮ್ಯಾರೇಜ್​ ಮ್ಯಾಟ್ರಿಮೋನಿಯನ್ನೂ ಆರಂಭಿಸಲಾಯ್ತು. ಆದರೆ ಕೆಲ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದಾಗಿ ಇವರಿಗೆ ಈ ಪೇಜ್​ನ್ನು ನಡೆಸೋದು ಅಷ್ಟೊಂದು ಸುಲಭವೇನಾಗಲಿಲ್ಲ. ಲಾಕ್​ಡೌನ್​ ಸಮಯದಲ್ಲಿ ಈ ಪೇಜ್​ ಇನ್ನಷ್ಟು ಸಕ್ರಿಯವಾಯ್ತು. ಫೇಸ್​​ಬುಕ್​​ನಲ್ಲಿ ಫಾಲೋವರ್ಸ್​ ಸಂಖ್ಯೆ 26500ಕ್ಕೆ ಏರಿಕೆಯಾಯ್ತು . ಅಲ್ಲದೇ ವಾಟ್ಸಾಪ್​ನಲ್ಲೂ ಜನರು ತಮ್ಮ ಪ್ರೊಫೈಲ್​ ಹಂಚಿಕೊಳ್ಳುತ್ತಿದ್ದಾರೆ ಅಂತಾರೆ ಈ ಗಣಿತ ಶಿಕ್ಷಕ.

ಕೆಲವೊಮ್ಮೆ ಫೇಸ್​ಬುಕ್​ ಹಾಗೂ ವಾಟ್ಸಾಪ್​ಗಳೆರೆಡರಲ್ಲಿಯೂ ಒಂದೇ ವ್ಯಕ್ತಿ ಪ್ರೊಫೈಲ್​ ಶೇರ್​ ಮಾಡಿರ್ತಾರೆ. ಇದನ್ನೆಲ್ಲ ಸರಿಯಾಗಿ ಸೋಸಿ, ಪ್ರೊಫೈಲ್​ ಕಳುಹಿಸಿದ ವ್ಯಕ್ತಿಯ ಜೊತೆ ಹಲವು ಸುತ್ತುಗಳ ಸಂದರ್ಶನ ನಡೆಸಿದ ಬಳಿಕ ಜನರು ನಾನಂದುಕೊಷ್ಟು ಜಾತ್ಯಾತೀತರಲ್ಲ ಅನ್ನೋದು ಸ್ಪಷ್ಟವಾಯ್ತು. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರು ಹೆಚ್ಚು ಜಾತ್ಯಾತೀತರು. ಇದರಲ್ಲಿ ಕೆಲವರು ಜಾತಕ ಹೊಂದಾಣಿಕೆಯಾಗದ ಕಾರಣ ನಮ್ಮಲ್ಲಿ ಪ್ರೊಫೈಲ್​ ಕಳಿಸಿರ್ತಾರೆ.

ಇನ್ನು ಕೆಲವರು ಧಾರ್ಮಿಕ ವಿಧಿವಿಧಾನಗಳಂತೆ ಮದುವೆಯಾಗಿ ಬಳಿಕ ಅಲ್ಲಿಂದ ವಿಚ್ಚೇಧನ ಪಡೆದು ಇಲ್ಲಿ ಬಂದವರೂ ಇದ್ದಾರೆ. ಆದರೆ ನಿಜವಾದ ವಿವರಗಳನ್ನ ಪಡೆದುಕೊಂಡ ಬಳಿಕವೇ ನಾನು ಸಾರ್ವಜನಿಕವಾಗಿ ಅಂತರ್​ಜಾತಿ ವಿವಾಹವಾಗಲಿಚ್ಚಿಸುವವರ ಪ್ರೊಫೈಲ್​ಗಳನ್ನ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡುತ್ತೇನೆ. ಈಗಾಗಲೇ ಇಂತಹ ಸಾಕಷ್ಟು ಮ್ಯಾಟ್ರಿಮೋನಿಗಳು ನಮ್ಮಲ್ಲಿವೆ. ಆದರೆ ತಾನು ಈ ಕೆಲಸಕ್ಕೆ ಹಣವನ್ನ ಪಡೆಯೋದಿಲ್ಲ ಎಂದು ಅವರು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...