ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಕೇರಳ ಸರ್ಕಾರ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೋಗ್ ಇಂಡಿಯಾ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ.
ಫ್ಯಾಶನ್ & ಲೈಫ್‌ಸ್ಟೈಲ್ ನಿಯತಕಾಲಿಕೆಯ ಭಾರತದ ಅವತರಣಿಕೆಯು ಶೈಲಜಾರಿಗೆ ಈ ಗೌರವ ನೀಡಿದ್ದು, ತನ್ನ ’ವುಮೆನ್ 2020’ ಪಟ್ಟಿಯಲ್ಲಿ ಈಕೆಯನ್ನು ಮೊದಲ ಸ್ಥಾನದಲ್ಲಿ ಇರಿಸಿದೆ.
ಕೋವಿಡ್-19 ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಆರೋಗ್ಯ ಸಚಿವೆ ಶೈಲಜಾ ಶ್ರಮಿಸಿದ್ದ ವಿಚಾರವನ್ನು ತನ್ನ ನವೆಂಬರ್ ತಿಂಗಳ ನಿಯತಕಾಲಿಕೆಯಲ್ಲಿ ವೋಗ್ ಪ್ರಶಂಶಿಸಿತ್ತು.
2018ರಲ್ಲಿ ನಿಫಾ ವೈರಸ್ ವಿರುದ್ಧ ಕೇರಳ ಸರ್ಕಾರದ ಹೋರಾಟದಲ್ಲಿ ಭಾಗಿಯಾಗಿದ್ದ ಶೈಲಜಾ ಈ ಬಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ವೋಗ್ ತಿಳಿಸಿದೆ.
ಇದೇ ವರ್ಷದ ಜೂನ್‌ನಲ್ಲಿ ಕೋವಿಡ್-19 ವಿರುದ್ಧ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವ ಕಾರಣಕ್ಕೆ ಶೈಲಜಾರನ್ನು ವಿಶ್ವಸಂಸ್ಥೆ ಪ್ರಶಂಶಿಸಿತ್ತು. ಸಾಂಕ್ರಮಿಕದ ವಿರುದ್ಧ ಹೋರಾಟ ಮಾಡುತ್ತಿರುವ ಮುಂಚೂಣಿ ಮಹಿಳೆಯರಲ್ಲಿ ಶೈಲಜಾ ಸಹ ಒಬ್ಬರು ಎಂದು ವಿಶ್ವ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
https://twitter.com/AntaraRC21/status/1325783300053458946?ref_src=twsrc%5Etfw%7Ctwcamp%5Etweetembed%7Ctwterm%5E1325783300053458946%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fkerala-health-minister-kk-shailaja-on-vogues-women-of-2020-cover-for-fight-against-covid-19-3062477.html