ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇರಳದ ಪಿಣರಾಯಿ ವಿಜಯನ್ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅನ್ನು ವಿಸ್ತರಿಸುವುದು, ಕಾನೂನು ಬದ್ಧವಾಗಿ ಮದುವೆ ಆಗಿರುವ ತೃತೀಯ ಲಿಂಗಿ ಜೋಡಿಗಳಿಗೆ ಆರ್ಥಿಕ ನೆರವು ನೀಡುವುದು ಸೇರಿದಂತೆ ಇನ್ನಷ್ಟು ಕಾರ್ಯಕ್ರಮಗಳನ್ನು ಕೇರಳ ಸರ್ಕಾರ ಹೊರತಂದಿದೆ.
ಸರ್ಕಾರೀ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಏಳನೇ ತರಗತಿಯಿಂದ ಮೇಲ್ಪಟ್ಟು ವ್ಯಾಸಂಗ ಮಾಡುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಆರು ಲಕ್ಷ ರೂ.ಗಳನ್ನು ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆ ಘೋಷಿಸಿದೆ.
ಇದೇ ವೇಳೆ, ತೃತೀಯ ಲಿಂಗಿಗಳು ಮದುವೆ ಮಾಡಿಕೊಂಡಲ್ಲಿ, ಅಂಥ ಪ್ರತಿ ಜೋಡಿಗೆ 30,000 ರೂ.ಗಳನ್ನು ಕೊಡಲೆಂದು ಮೂರು ಲಕ್ಷ ರೂ.ಗಳನ್ನು ಸಹ ಘೋಷಿಸಲಾಗಿದೆ.