ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರ ತೊಡೆ ತಟ್ಟಿದೆ.
ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಕೇರಳ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ತ್ರಿಶೂರ್ನಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ನಾವು ಕೃಷಿ ಕಾನೂನುಗಳನ್ನ ಜಾರಿಗೆ ತರೋದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಸಹ ಅದನ್ನ ಎದುರಿಸೋಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ಕೇಂದ್ರದ ಈ ಕಾನೂನು ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವುದಕ್ಕೆ ಪೂರಕವಾಗಿದೆ. ಈ ಕಾನೂನುಗಳ ವಿರುದ್ಧ ನಾವು ಈ ವಾರವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಸುನೀಲ್ ಕುಮಾರ್ ಗುಡುಗಿದ್ದಾರೆ.