ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ ಈ ಕಷ್ಟವನ್ನ ಅರಿತ ಕೇರಳದ ಕನ್ನೂರು ಜಿಲ್ಲೆಯ ಆಟೋ ಚಾಲಕ ರೋಗಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ಈಗಾಗಲೇ 500 ರೋಗಿಗಳನ್ನ ತಮ್ಮ ಆಟೋದಲ್ಲೇ ಸಾಗಿಸಿದ್ದಾರೆ ಪ್ರೇಮ ಚಂದ್ರನ್.
ಮೊಬೈಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಪೋಸ್ಟ್ ಪೇಯ್ಡ್ ನಿಂದ ಪ್ರಿಪೇಯ್ಡ್ ಗೆ ಬದಲಾವಣೆ ಈಗ ಬಲು ಸುಲಭ
ಗರ್ಭಿಣಿಯನ್ನ ಆಸ್ಪತ್ರೆಗೆ ಸಾಗಿಸುವ ಮೂಲಕ ಮೊದಲ ಬಾರಿಗೆ ಪ್ರೇಮ ಚಂದ್ರನ್ ಈ ಸೇವೆಯನ್ನ ಆರಂಭಿಸಿದ್ರು. ಗಲ್ಫ್ ರಾಷ್ಟ್ರದಿಂದ ಹಿಂದಿರುಗಿದ್ದ ಮಹಿಳೆಗೆ ಕೊರೊನಾ ಲಕ್ಷಣಗಳಿದ್ದರೂ ಸಹ ಪ್ರೇಮ ಚಂದ್ರನ್ ತಮ್ಮ ಆಟೋದಲ್ಲಿ ಸಾಗಿಸಿದ್ದರು. ಇಲ್ಲಿಂದ ಆರಂಭವಾದ ಇವರ ಕೋವಿಡ್ ಸೋಂಕಿತರ ಸೇವೆಗೆ ಇನ್ನೂ ಮುಂದುವರಿದುಕೊಂಡು ಬಂದಿದೆ. ಪ್ರತಿ ಬಾರೀ ರೋಗಿಯನ್ನ ಸಾಗಿಸಿದ ಬಳಿಕ ಪ್ರೇಮಚಂದ್ರನ್ ತಮ್ಮ ಆಟೋವನ್ನ ಶುಚಿಗೊಳಿಸುತ್ತಾರೆ.
ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿಗೆ ಜಾಮೂನು ಕೊಡುವುದಾಗಿ ಕರೆದೊಯ್ದು ಗ್ಯಾಂಗ್ ರೇಪ್
ಪ್ರೇಮ ಚಂದ್ರನ್ ಕಳೆದ 30 ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೋವಿಡ್ನ ಈ ಸಂದರ್ಭದಲ್ಲಿ ಮಾನವೀಯ ಕಾರ್ಯ ಮಾಡುತ್ತಿರುವ ಪ್ರೇಮಚಂದ್ರನ್ಗೆ ಕುಟುಂಬಸ್ಥರ ಸಾಥ್ ಕೂಡ ಇದೆ.