ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ಅನ್ನು ನುಂಗಿಬಿಟ್ಟಿದ್ದರು.
ಇದಾದ ಬಳಿಕ ನಿರಂತರ ಕೆಮ್ಮಿನ ಸಮಸ್ಯೆಯಿಂದ ನರಳುತ್ತಿದ್ದರು. ಖಾಸಗಿ ಕ್ಲಿನಿಕ್ ಒಂದರ ವೈದ್ಯರು ಆಕೆಯ ದೇಹದಲ್ಲಿ ಹೊರಗಿನ ವಸ್ತುವೊಂದು ಸೇರಿಕೊಂಡಿದೆ ಎಂಬ ಅನುಮಾನ ವ್ಯಕ್ತಪಡಿಸಿ, ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೋಗಿ ತೋರಿಸುವಂತೆ ಆಕೆಗೆ ಸೂಚಿಸಿದ್ದಾರೆ.
ವೈದ್ಯರಾದ ರಾಜೀವ್ ರಾಮ್ ಹಾಗೂ ಪದ್ಮನಾಭನ್ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿನ ತಂಡವು ಮಹಿಳೆಯ ಸಮಸ್ಯೆಯನ್ನು ಪರಿಶೀಲಿಸಿ, ಆಕೆಯ ಬ್ರಾಂಕಸ್ ಪಥದಲ್ಲಿ ಸಿಲುಕಿದ್ದ ಸೀಟಿಯನ್ನು ಹೊರತೆಗೆದಿದ್ದಾರೆ.
ಜೈಲು ಸೇರುವಂತೆ ಮಾಡಿದೆ ಗೆಳತಿಗಾಗಿ ಈತ ಮಾಡಿದ ಕೆಲಸ
25 ವರ್ಷಗಳ ಹಿಂದೆ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಆಕೆಯ ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿಯನ್ನು ಬ್ರಾಂಕೋಸ್ಕೋಪಿ ಮಾಡಿ ವೈದ್ಯರು ಹೊರತೆಗೆದಿದ್ದಾರೆ.
ಆಸ್ತಮಾ ಕಾರಣದಿಂದ ತಮಗೆ ಉಸಿರಾಟದ ಸಮಸ್ಯೆ ಇದೆ ಎಂದು ಮಹಿಳೆ ಭಾವಿಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಮಾಡಿ ಸೀಟಿ ಹೊರತೆಗೆದ ಬಳಿಕ ಸಮಸ್ಯೆ ಏನೆಂದು ಆಕೆಯ ಅರಿವಿಗೆ ಬಂದಿದೆ.