ಪಕ್ಕದ ಮನೆ ಹುಡುಗನ ಬೈಸಿಕಲ್ ಕದ್ದ ಆಪಾದನೆ ಎದುರಿಸುತ್ತಿದ್ದ ಮೂರನೇ ತರಗತಿಯ ಹುಡುಗನಿಗೆ ಹೊಸ ಬೈಸಿಕಲ್ ಕೊಡಿಸಿದ ಕೇರಳ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಕಥೆಯನ್ನು ಬೈಸಿಕಲ್ ಶಾಪ್ ಮಾಲೀಕ ಲತೀಫ್ ಅಟ್ಟಪ್ಪಾಡಿ ಅವರು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಬೈಸಿಕಲ್ ಓಡಿಸಬೇಕೆಂಬ ಹುಡುಗುತನದ ಆಸೆ ಆ ಬಾಲಕನಿಗೆ ಹೀಗೆ ಮಾಡುವಂತೆ ಪ್ರೇರೇಪಣೆ ಕೊಟ್ಟಿದೆ. ಈ ವಿಷಯವನ್ನು ಬಾಲಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಪೊಲೀಸ್ಗೆ ದೂರು ಕೊಡುವ ಮಟ್ಟಕ್ಕೆ ಕೊಂಡೊಯ್ಯಲಾಗಿತ್ತು. ವಿಷಯವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲಾಯಿತು. ಶೋಲಯಾರ್ನ ಠಾಣಾಧಿಕಾರಿ ಈ ಘಟನೆಯಿಂದ ಮನನೊಂದು ಆ ಬಾಲಕನಿಗೆ ಬೈಸಿಕಲ್ ಕೊಡಿಸಲು ನಿರ್ಧರಿಸಿದರು. ಅದಕ್ಕಾಗಿ ಅವರು ನಮ್ಮ ಅಂಗಡಿಗೆ ಬಂದಿದ್ದರು” ಎಂದು ಲತೀಫ್ ಬರೆದಿದ್ದಾರೆ.
ದಾರಿತಪ್ಪಿದ ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಸಹೋದರನ ಜೀವ ತೆಗೆದ
ಪೊಲೀಸರು ವಿಚಾರಣೆ ಮಾಡಿದಾಗ ತನಗೆ ಬೈಸಿಕಲ್ ಓಡಿಸಬೇಕೆಂಬ ಆಸೆ ಮಾತ್ರ ಇತ್ತೆಂದು ಬಾಲಕ ಹೇಳಿದ್ದಾನೆ. “ಖುದ್ದು ಪೊಲೀಸ್ ಅಧಿಕಾರಿ ಸಹ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ತಮ್ಮ ಬಳಿ ಬೈಸಿಕಲ್ ಇರಲಿಲ್ಲ ಎಂದಿದ್ದಾರೆ. ನಾನು ಸಹ ನನ್ನ ವಿದ್ಯಾರ್ಥಿ ದಿನಗಳಲ್ಲಿ ಬಾಡಿಗೆಗೆ ಬೈಸಿಕಲ್ ಪಡೆದುಕೊಂಡು ಓಡಿಸುತ್ತಿದ್ದೆ” ಎಂದು ಲತೀಫ್ ತಿಳಿಸಿದ್ದಾರೆ.