ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಾಮಾಜಿಕ ಅಂತರದ ಜೊತೆಗೆ ಕೈಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಮಹತ್ವ ಕೊಡುತ್ತಿದ್ದಾರೆ. ಜತೆಗೆ ತಮ್ಮ ಜೊತೆಯವರೂ ಈ ಅಂಶಗಳನ್ನು ಅನುಸರಿಸಲು ಒತ್ತಡ ತರುತ್ತಿದ್ದಾರೆ.
ಪ್ರತಿಯೊಬ್ಬರು ಕನಿಷ್ಠ 20 ಸೆಕೆಂಡುಗಳ ಕಾಲ ದಿನದಲ್ಲಿ ಹಲವು ಬಾರಿ ಕೈ ತೊಳೆಯಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಹೀಗಿರುವಾಗ ಕೇರಳದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಹಾಗೂ ತಮ್ಮ ಪ್ರಯಾಣಿಕರ ಸ್ವಚ್ಛತೆ ಖಾತ್ರಿ ಮಾಡಿಕೊಳ್ಳಲು ಆಟೋದಲ್ಲಿ ಸೋಪು – ನೀರಿನ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.
ತಿರುವನಂತಪುರದಲ್ಲಿ ಆಟೋರಿಕ್ಷಾ ಚಾಲಕ ಮಾಡಿರುವ ಪ್ರಯೋಗದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಆಟೋ ಹತ್ತಲು ಬರುವ ಗ್ರಾಹಕರಿಗೆ ಕೈತೊಳೆಯುವಂತೆ ಸೂಚಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಉದ್ಯಮಿ ಹರ್ಷ ಗೋಯಂಕ ಸಹ ಪ್ರಭಾವಿತರಾಗಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.