
ಏಪ್ರಿಲ್ 19ರ ಸಂಜೆ 7ಗಂಟೆಯವರೆಗೂ kvsonlineadmission.kvs.gov.in.ನಲ್ಲಿ ನೋಂದಾವಣಿಗೆ ಅವಕಾಶ ನೀಡಲಾಗಿದೆ. ಲಭ್ಯವಿರುವ ಸೀಟುಗಳನ್ನ ಗಮನದಲ್ಲಿಟ್ಟುಕೊಂಡು ಮೊದಲ ಆದ್ಯತೆಯ ಪಟ್ಟಿ ಏಪ್ರಿಲ್ 23ರಂದು ಪ್ರಕಟಿಸಲಾಗುತ್ತದೆ. ಎರಡು ಹಾಗೂ ಮೂರನೇ ಆದ್ಯತೆಯ ಪಟ್ಟಿಯನ್ನ ಏಪ್ರಿಲ್ 30 ಹಾಗೂ ಮೇ 5ರಂದು ಕ್ರಮವಾಗಿ ಪ್ರಕಟಿಸಲಾಗುವುದು.
ಪೋಷಕರು ತಮ್ಮ ಮಕ್ಕಳ ನೋಂದಾವಣಿಗಾಗಿ ಹಲವಾರು ಬಾರಿ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ. ಒಂದೇ ಮಗುವಿನ ಹೆಸರಲ್ಲಿ ಹಲವು ಬಾರಿ ಅರ್ಜಿ ಸಲ್ಲಿಕೆ ಮಾಡಿದ್ರೆ ಕೇಂದ್ರೀಯ ವಿದ್ಯಾಲಯ ಕೊನೆಯ ಅರ್ಜಿಯನ್ನ ಪರಿಗಣನೆ ಮಾಡಲಿದೆ.
ಕೇಂದ್ರೀಯ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುವ ಪೋಷಕರು ಈ ಕೆಳಗಿನ ಅಂಶಗಳನ್ನ ಗಮನದಲ್ಲಿಡಬೇಕು :
ಭಾರತೀಯ ಸಿಮ್ನ್ನು ಹೊಂದಿರುವ ಅಧಿಕೃತ ಮೊಬೈಲ್ ಸಂಖ್ಯೆ
ಅಧಿಕೃತ ಇ ಮೇಲ್ ಐಡಿ
ಡಿಜಿಟಲ್ ಅಥವಾ ಸ್ಕ್ಯಾನ್ ಮಾಡಿರುವ ಮಗುವಿನ ಫೋಟೋ ( 256 ಕೆಬಿ ಜೆಪಿಇಜಿ ಫೈಲ್)
ಜನನ ಪ್ರಮಾಣ ಪತ್ರದ ಸ್ಕ್ಯಾನ್ ಕಾಪಿ ( 256 ಕೆಬಿ – ಜೆಪಿಇಜಿ ಅಥವಾ ಪಿಡಿಎಫ್ ಫೈಲ್)
ಪೋಷಕರ ಅಥವಾ ಅಜ್ಜಿ – ತಾತಂದಿರ ವರ್ಗಾವಣೆ ಪ್ರಮಾಣ ಪತ್ರ
ಒಂದನೇ ತರಗತಿಯ ಮಕ್ಕಳನ್ನ ದಾಖಲು ಮಾಡಲಿಚ್ಚಿಸುವ ಪೋಷಕರು ಆನ್ಲೈನ್ ದಾಖಲಾತಿ ಪೋರ್ಟಲ್ನಲ್ಲಿ ಮಗುವಿನ ಜನನ ಪ್ರಮಾಣ ಪತ್ರದ ಸ್ಕ್ಯಾನ್ ಕಾಪಿಯನ್ನ ಸಲ್ಲಿಸಬೇಕು. ದಾಖಲಾತಿ ಸಮಯದ ವೇಳೆ ಮಗುವಿನ ಜನನ ಪ್ರಮಾಣ ಪತ್ರದ ಒರಿಜಿನಲ್ ಕಾಪಿಯನ್ನ ಒದಗಿಸಬೇಕಾಗುತ್ತದೆ. ಇದನ್ನ ಬಳಿಕ ಪೋಷಕರಿಗೆ ಹಿಂದಿರಿಗಿಸಲಾಗುತ್ತದೆ.
ಸ್ಪೆಷಲ್ ಪ್ರಾವಿಜನ್ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿ ಬಳಿಕ ಕೆವಿ ಪ್ರಾಂಶುಪಾಲರನ್ನ ಸಂಪರ್ಕ ಮಾಡಬೇಕು. ಸ್ಪೆಷಲ್ ಪ್ರಾವಿಜನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಕೇಳುವ ದಾಖಲಾತಿಗಳನ್ನ ಒದಗಿಸಬೇಕು.
ಓರ್ವ ಹೆಣ್ಣು ಮಗಳು ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು ಆನ್ಲೈನ್ ಪೋರ್ಟಲ್ನಲ್ಲಿ ರಿಜಿಸ್ಟ್ರೇಷನ್ ಮಾಡಿದ ಬಳಿಕ ಪ್ರಾಂಶುಪಾಲರನ್ನ ಸಂಪರ್ಕಿಸಬೇಕೆಂದಿಲ್ಲ.