alex Certify KBC ಯಲ್ಲಿ ಸರಿಯುತ್ತರ ನೀಡಿದರೂ ಶಿಕ್ಷಕಿ ಕೈ ತಪ್ಪಿದೆ 7 ಕೋಟಿ…! ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBC ಯಲ್ಲಿ ಸರಿಯುತ್ತರ ನೀಡಿದರೂ ಶಿಕ್ಷಕಿ ಕೈ ತಪ್ಪಿದೆ 7 ಕೋಟಿ…! ಕಾರಣವೇನು ಗೊತ್ತಾ…?

ಮುಂಬೈ: ಸೋನಿ‌ ಟಿವಿಯ ಪ್ರಸಿದ್ಧ ಶೋ ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ‌ 12 ನೇ ಆವೃತ್ತಿ ಪ್ರತಿ ವರ್ಷದಂತೆ ಈ ಬಾರಿಯೂ ಟಿವಿ ಕ್ಷೇತ್ರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಅನುಪಾ ದಾಸ್ ಎಂಬ ಶಿಕ್ಷಕಿ ಈ ಆವೃತ್ತಿಯ ಮೂರನೇ ಕರೋಡಪತಿಯಾಗಿ ಹೊರ ಹೊಮ್ಮಿದ್ದಾರೆ.

ಅವರು 7 ಕೋಟಿ ರೂ.ಗಳ ಪ್ರಶ್ನೆಗೆ ಸರಿ ಉತ್ತರ ನೀಡಿದ್ದಾರೆ. ಆದರೆ, ಅವರು ಉತ್ತರ ನೀಡುವ ಮೊದಲೇ ಕ್ವಿಟ್ ಮಾಡಿದ್ದರಿಂದ 1 ಕೋಟಿ ರೂ.ಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಛತ್ತೀಸ್ಗಢದ ಶಿಕ್ಷಕಿ ಅನುಪಾ ದಾಸ್ 20 ವರ್ಷಗಳಿಂದ ಕೆಬಿಸಿಗೆ ಬರುವ ಪ್ರಯತ್ನ ಮಾಡಿದ್ದರು. ಈ ಬಾರಿ ಅವರಿಗೆ ಅವಕಾಶ ಸಿಕ್ಕಿತ್ತು. ಚುರುಕಾಗಿ ಉತ್ತರವನ್ನೂ ನೀಡಿ ಕೋಟಿ ವೀರೆ ಎನಿಸಿಕೊಂಡಿದ್ದಾರೆ.

1 ಕೋಟಿ ರೂ. ಗೆದ್ದ ನಂತರ ಅವರು 7 ಕೋಟಿ ಪ್ರಶ್ನೆ ಆಯ್ದುಕೊಂಡರು. ಅದರಲ್ಲಿ ಅಮಿತಾಬ್ ಬಚ್ಚನ್ “ರಿಯಾಜ್ ಪುಣಾವಾಲಾ ಹಾಗೂ ಶೌಕತ್ ದುಖಾನ್ ವಾಲಾ ಎಂಬುವವರು ಏಕ‌ ದಿನ ಕ್ರಿಕೆಟ್ ಪಂದ್ಯದಲ್ಲಿ ಯಾವ ತಂಡವನ್ನು ಪ್ರತಿನಿಧಿಸಿದ್ದರು..?” ಎಂಬ 7 ಕೋಟಿ ರೂ.ಪ್ರಶ್ನೆ ಕೇಳಿದ್ದರು. ಬಿ- ಯುನೈಟೆಡ್ ಅರಬ್ ಎಮರೈಟ್ಸ್ ಎಂಬುದು ಸರಿ ಉತ್ತರವಾಗಿತ್ತು. ಶಿಕ್ಷಕಿಗೆ ಉತ್ತರ ಗೊತ್ತಿರಲಿಲ್ಲ. ಇದರಿಂದ ಕ್ವಿಟ್ ಮಾಡಿ ನಂತರ ಊಹೆ ಮಾಡಿದರು. ಅವರು ಊಹೆ ಮಾಡಿದ ಉತ್ತರವೂ ಸರಿಯಾಗೇ ಇತ್ತು ಎಂಬುದು ವಿಶೇಷ.

https://www.instagram.com/p/CH2V2fJn4rj/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...