ಕೊರೊನಾ ಸೋಂಕು ವಿಶ್ವವನ್ನು ಕಂಗೆಡಿಸಿದೆ. ಆಮ್ಲಜನಕದ ಕೊರತೆ ದೇಶದ ಜನರನ್ನು ಕಾಡ್ತಿದೆ. ಈ ಮಧ್ಯೆ ಕಾಶ್ಮೀರದ ವ್ಯಕ್ತಿಯೊಬ್ಬ ಖುಷಿ ಸುದ್ದಿ ನೀಡಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ವಾಸವಾಗಿರುವ ಮೊಹಮ್ಮದ್ ಇಸ್ಮಾಯಿಲ್ ಕಳೆದ ಕೆಲವು ತಿಂಗಳಿಂದ Oxygen Concentrator ತಯಾರಿ ಕೆಲಸ ಮಾಡ್ತಿದ್ದಾರೆ. ಇದು ಆಮ್ಲಜನಕದ ಕೊರತೆ ನೀಗಿಸಲು ಸಹಕಾರಿಯಾಗಲಿದೆ.
ಕೊರೊನಾ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಈ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವುದು ಬಹಳ ಮುಖ್ಯ. Oxygen Concentrator ತಯಾರಿ ಪೂರ್ಣಗೊಂಡಿಲ್ಲ. ಇದ್ರ ಬಗ್ಗೆ ಕೆಲಸ ನಡೆಯುತ್ತಿದೆ. ಚೀನಾದಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ ನಮ್ಮ ದೇಶದಲ್ಲಿಯೇ ಇದ್ರ ಬಗ್ಗೆ ಪ್ರಯತ್ನ ನಡೆಯಬೇಕೆಂದು ಮೊಹಮ್ಮದ್ ಇಸ್ಮಾಯಿಲ್ ಹೇಳಿದ್ದಾರೆ.
ಇಸ್ಮಾಯಿಲ್ 12ನೇ ತರಗತಿ ಪಾಸ್ ಆಗಿದ್ದಾರೆ. ಆದ್ರೆ ಆವಿಷ್ಕಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೀಟಾಣುನಾಶಕ ಟನಲ್ ಮಾಡಿದ್ದ ಇಸ್ಮಾಯಿಲ್, ಸ್ಯಾನಿಟೈಜರ್ ಮಶಿನ್ ತಯಾರಿಸಿದ್ದರು. ಇದಲ್ಲದೆ ಇಸ್ಮಾಯಿಲ್ ವೆಂಟಿಲೇಟರ್ ಕೂಡ ತಯಾರಿಸಿದ್ದಾರೆ.
ಇಸ್ಮಾಯಿಲ್ ಈಗ ತಯಾರಿಸಿರುವ Oxygen Concentratorಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಆದ್ರೆ ಸರ್ಕಾರ ನೆರವು ನೀಡಿದ್ರೆ ಕಡಿಮೆ ಬೆಲೆಗೆ ಇದನ್ನು ಮಾರಾಟ ಮಾಡಬಹುದು ಎಂದು ಅವರು ಹೇಳಿದ್ದಾರೆ.