ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕರಾಚಿ ಬೇಕರಿ ಕೊನೆಗೂ ಬಾಗಿಲು ಮುಚ್ಚಿದೆ. ಹೆಸರಿನ ಕಾರಣಕ್ಕಾಗಿಯೇ ಈ ಬೇಕರಿಯ ಬಾಗಿಲು ಮುಚ್ಚಿರುವುದು ವಿಶೇಷ.
ಪಾಕಿಸ್ತಾನದ ಕರಾಚಿಯಿಂದ ವಲಸೆ ಬಂದು ಹೈದರಾಬಾದಿನಲ್ಲಿ ನೆಲೆಸಿದ್ದ ಸಿಂಧಿ ಕುಟುಂಬವೊಂದು ಈ ಬೇಕರಿಯನ್ನು ನಿರ್ವಹಿಸುತ್ತಿದ್ದು, ಆದರೆ ಬೇಕರಿಗೆ ಪಾಕಿಸ್ತಾನದ ನಗರ ಕರಾಚಿ ಹೆಸರಿಟ್ಟಿರುವುದು ವಿರೋಧಕ್ಕೆ ಕಾರಣವಾಗಿತ್ತು.
2020ರ ನವೆಂಬರ್ ನಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರು ಈ ಬೇಕರಿಗೆ ಮುತ್ತಿಗೆ ಹಾಕಿ ಹೆಸರನ್ನು ಬದಲಿಸುವಂತೆ ಒತ್ತಾಯಿಸಿದ್ದರು. ಇದೀಗ ಆ ಬೇಕರಿಯನ್ನೇ ಮಾಲೀಕರು ಮುಚ್ಚಿದ್ದಾರೆ.