ಅಮೆರಿಕದ ಉಪಾಧ್ಯಕ್ಷೆಯಾಗಿ ಇಂದು ಅಧಿಕಾರ ಅಧಿಕಾರ ಸ್ವೀಕಾರ ಮಾಡಲಿರುವ ಕಮಲಾ ಹ್ಯಾರಿಸ್ ಅಮೆರಿಕ ರಾಜಕೀಯ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈ ನಡುವೆ ಕಮಲಾ ಹ್ಯಾರಿಸ್ ಪೂರ್ವಜರು ತಮಿಳುನಾಡಿನಲ್ಲಿ ವಾಸವಿದ್ದರು ಎನ್ನಲಾದ ತುಳಸಿಪುರಂ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರದ ದಿನದಿಂದ ಹಿಡಿದು ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವವರೆಗೂ ಒಂದಿಲ್ಲೊಂದು ಕಾರಣದಿಂದ ತುಳಸಿಪುರಂ ಗ್ರಾಮ ಸುದ್ದಿಯಾಗುತ್ತಲೇ ಇದೆ. ಇದೀಗ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರಕ್ಕೆ ಕೌಂಟ್ಡೌನ್ ಶುರುವಾಗಿರೋದ್ರಿಂದ ಗ್ರಾಮದ ತುಂಬೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.
ಇಷ್ಟು ಮಾತ್ರವಲ್ಲದೇ ಗ್ರಾಮದ ರಸ್ತೆಗಳು ಹಾಗೂ ದೇವಾಲಯಗಳನ್ನ ಸ್ವಚ್ಛಗೊಳಿಸಿ ಕಮಲಾ ಹ್ಯಾರಿಸ್ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯಗಳನ್ನ ನೆರವೇರಿಸಲಾಗಿದೆ. ಇದು ಮಾತ್ರವಲ್ಲದೇ ಪದಗ್ರಹಣ ಕಾರ್ಯಕ್ರಮದ ವೇಳೆ ಸಂಪೂರ್ಣ ಗ್ರಾಮಕ್ಕೇ ಸಿಹಿ ಹಂಚುವ ಸಲುವಾಗಿ ತಮಿಳುನಾಡಿನ ಸಾಂಪ್ರದಾಯಿಕ ಮುರುಕ್ಕು ತಿಂಡಿಯನ್ನ ತಯಾರಿಸಲಾಗಿದೆ.
ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕಮಲಾ ಹ್ಯಾರಿಸ್ ತಾಯಿ – ತಂದೆ ತುಳಸಿಪುರಂ ಗ್ರಾಮದ ನಿವಾಸಿಯಾಗಿದ್ದರು.