ಕೋಳಿ ಮಾಂಸಕ್ಕೆ ಇರುವ ಬೇಡಿಕೆ ಒಂದೆಡೆಯಾದ್ರೆ ಕಡಕ್ನಾಥ್ ಕೋಳಿ ಮಾಂಸಕ್ಕೆ ಇರುವ ಬೇಡಿಕೆಯೇ ಇನ್ನೊಂದ್ ಕಡೆ. ಕಪ್ಪು ಬಣ್ಣದ ಮಾಂಸದಿಂದಾಗಿ ಫೇಮಸ್ ಆಗಿರುವ ಈ ಕಡಕ್ನಾಥ್ ಕೋಳಿ ಮಾಂಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತೆ.
ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರೋದ್ರಿಂದ ಆರೋಗ್ಯ ಕಾಪಾಡಿಕೊಳ್ಳುವವರಿಗೆ ಕಡಕ್ನಾಥ್ ಚಿಕನ್ ಅಂದ್ರೆ ಪಂಚಪ್ರಾಣ. ಈ ಕಡಕ್ನಾಥ್ ಚಿಕನ್ ಇದೀಗ ಹೈದರಾಬಾದ್ನಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಮಾಂಸವಾಗಿದೆ. ಡೀಲರ್ಗಳು ನೀಡಿರುವ ಮಾಹಿತಿಯ ಪ್ರಕಾರ ಕಡಕ್ನಾಥ್ ಚಿಕನ್ ಪ್ರತಿ ಕೆಜಿಯ ಬೆಲೆ 1000 ರೂಪಾಯಿಯಿಂದ 1200 ರೂಪಾಯಿಗಳವರೆಗೆ ಇದೆ. ಇನ್ನು ಪ್ರತಿ ಕೋಳಿಯು ಕೆಜಿಗೆ 850 ರೂಪಾಯಿಯಂತೆ ಮಾರಾಟವಾಗ್ತಿದೆ.
ಈ ತಳಿಯು ಮಧ್ಯ ಪ್ರದೇಶ, ಚತ್ತೀಸಗಢ, ಗುಜರಾತ್ ಹಾಗೂ ರಾಜಸ್ಥಾನದ ಕೆಲ ಭಾಗಗಳಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತೆ. ಬುಡಕಟ್ಟು ಸಮುದಾಯದವರು ಹೆಚ್ಚಾಗಿ ಈ ಕೋಳಿಯನ್ನ ಸಾಕ್ತಾರೆ. ಈ ಕೋಳಿಯ ಗರಿಯಿಂದ ಹಿಡಿದು ಮಾಂಸದವರೆಗೂ ಬಣ ಕಪ್ಪಗಿರುತ್ತೆ. ಇದರ ಮೊಟ್ಟೆ ಕೂಡ ಕಪ್ಪು ಎಂದು ಅನೇಕರು ಹೇಳುತ್ತರಾದರೂ ಕಡಕ್ನಾಥ್ ಕೋಳಿ ಮೊಟ್ಟೆ ಕಂದು ಹಾಗೂ ಗುಲಾಬಿ ಬಣ್ಣದ ನಡುವೆ ಇದೆ.