ಕೊರೊನಾ ಸೋಂಕು ಹರಡುತ್ತಿರುವುದರಲ್ಲಿ ಜಗತ್ತಿನ ಎರಡನೇ ರಾಷ್ಟ್ರ ಎಂಬ ಅಪಾಯಕಾರಿ ಸ್ಥಿತಿಯಲ್ಲಿ ಭಾರತ ದೇಶವಿದೆ. ಆದರೆ, ಇದ್ಯಾವುದರ ಪರಿವೆಯೂ ಇಲ್ಲದವರಂತೆ ಗುಜರಾತ್ ಮಂದಿ ವರ್ತಿಸಿದ್ದಾರೆ.
ವಡೋದರದ ಸಯ್ಯಾಜಿ ರಸ್ತೆಯಲ್ಲಿರುವ ಉದ್ಯಾನವನ ಪುನಾರಂಭ ಮಾಡಲು ಸ್ಥಳೀಯ ಆಡಳಿತ ಆದೇಶಿಸಿತ್ತು. ಇದರ ಖುಷಿ ಹಂಚಿಕೊಳ್ಳಲು ಸೇರಿದ ನಡಿಗೆದಾರರು, ಯಾವ ಅಂತರವನ್ನೂ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಉದ್ಯಾನ ತೆರೆಯುವುದರಿಂದ, ಪಟಾಕಿ ಸಿಡಿಸುವುದರಿಂದ ಕೊರೋನಾ ವೈರಾಣು ನಾಶ ಆಗಿಬಿಡುತ್ತದೆ ಎನ್ನುವ ರೀತಿಯಲ್ಲಿ ವರ್ತಿಸಿರುವ ಸಾರ್ವಜನಿಕರ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವರ್ತನೆಯನ್ನು ಮೂರ್ಖತನ ಎಂದಿದ್ದಾರೆ.
https://twitter.com/purpleskiey/status/1303929803389546496?ref_src=twsrc%5Etfw%7Ctwcamp%5Etweetembed%7Ctwterm%5E1303929803389546496%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fjoggers-in-gujarat-burst-crackers-flout-social-distancing-to-celebrate-opening-of-parks-2865743.html