alex Certify ನಿಶ್ಚಿತಾರ್ಥವಾಗುತ್ತಿದ್ದಂತೆಯೇ ಶುರು ಲೈಂಗಿಕ ಸಂಪರ್ಕ…..ಎಲ್ಲಾ ಓಕೆ ಮದುವೆ ಯಾಕೆ ಎಂದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತಾರ್ಥವಾಗುತ್ತಿದ್ದಂತೆಯೇ ಶುರು ಲೈಂಗಿಕ ಸಂಪರ್ಕ…..ಎಲ್ಲಾ ಓಕೆ ಮದುವೆ ಯಾಕೆ ಎಂದ ಯುವಕ..!

ರಾಜಸ್ಥಾನದ ಜೋಧಪುರದ ಯುವಕನೊಬ್ಬ ತಾನು ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವತಿ ಜೊತೆ ಲೈಂಗಿಕ ಸಂಪರ್ಕ ಮಾಡಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಯುವಕನ ವಿರುದ್ಧ ಅತ್ಯಾಚಾರದ ದೂರನ್ನ ದಾಖಲಿಸಿದ್ದಾಳೆ.

ಜೋಧಪುರ ಪೊಲೀಸ್​ ಠಾಣೆಗೆ ಆಗಮಿಸಿದ ಯುವತಿ ನಗರದ ರಾಥಾನಾಡಾ ಕ್ಷೇತ್ರ ವ್ಯಾಪ್ತಿಯ ಗೆಸ್ಟ್​ ಹೌಸ್​ ಒಂದರಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾಳೆ. ದೂರನ್ನ ದಾಖಲಿಸಿದ ಯುವತಿ ಹಾಗೂ ಆರೋಪಿ ನಡುವೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಯುವಕ ಸಂತ್ರಸ್ತೆಯನ್ನ  ನವೆಂಬರ್ 29ರಂದು ಗೆಸ್ಟ್​ ಹೌಸ್​ಗೆ ಕರೆಸಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದಾದ ಬಳಿಕ ತಾನು ಮದುವೆಯಾಗೊಲ್ಲ ಎಂದು ಹೇಳಿದ್ದಾನೆ ಅಂತಾ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಬಳಿಕ ಸರಿಸುಮಾರು 1 ತಿಂಗಳುಗಳ ಕಾಲ ಎರಡೂ ಕುಟುಂಬದ ನಡುವೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಯುವಕ ಮಾತ್ರ ಮದುವೆ ಆಗೋಕೆ ಸುತಾರಾಂ ಒಪ್ಪಿಗೆ ನೀಡಿಲ್ಲ. ಹೀಗಾಗಿ ಯುವತಿ ದೂರನ್ನ ದಾಖಲಿಸಿದ್ದಾಳೆ. ರಾತಾನಾಡಾ ಠಾಣೆಯ ಎಸ್​ಹೆಚ್​ಒ ಲೀಲಾರಾಮ್​ ಈ ವಿಚಾರವಾಗಿ ಮಾತನಾಡಿ, ಯುವಕ ಹಾಗೂ ಯುವತಿ ನಡುವೆ ಕಳೆದ ವರ್ಷ ಮದುವೆ ನಿಶ್ಚಯವಾಗಿತ್ತು. ಆದರೆ ಇಬ್ಬರ ನಡುವೆ ಲೈಂಗಿಕ ಸಂಪರ್ಕ ಬೆಳೆದಿದ್ದೇ ತಡ ಯುವಕ ಮದುವೆಯಿಂದ ಹಿಂದೆ ಸರಿದಿದ್ದಾನೆ ಎಂದು ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೇ ಲೈಂಗಿಕ ಸಂಪರ್ಕದ ಬಳಿಕವೂ ಇವರಿಬ್ಬರೂ ಒಬ್ಬರನೊಬ್ಬರು ಭೇಟಿ ಮಾಡುತ್ತಲೇ ಇದ್ದರು. ಆದರೆ ಮದುವೆ ವಿಚಾರ ಬಂದಾಗ ಯುವಕ ಯುವತಿಯ ಜೊತೆ ಮಾತನಾಡೋದನ್ನ ನಿಲ್ಲಿಸಿದ್ದಾನೆ. ಅಲ್ಲದೇ ಮದುವೆಯಾಗಲ್ಲ ಅಂತಾ ಕುಟುಂಬಸ್ಥರ ಎದುರು ಹೇಳಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್​ 376, 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...