ತುರ್ತು ಚಿಕಿತ್ಸೆ ಅವಶ್ಯವಿರುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗದ ರೋಗಿಗಳನ್ನ ಸಾಗಿಸಲು ರಾಜ್ ಭವನದ ಹೆಲಿಕಾಫ್ಟರ್ ಬಳಕೆ ಮಾಡಲಾಗುವುದು. ಹಾಗೂ ಈ ಸೇವೆಯನ್ನ ಉಚಿತವಾಗಿ ನೀಡಲಿದ್ದೇವೆ ಅಂತಾ ಜಮ್ಮು ಕಾಶ್ಮೀರದ ಲೆ. ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳೆಗಿರುವವರು ಈಗಾಗಲೇ ಜಾರಿಯಲ್ಲಿರುವ ಹೆಲಿಕಾಪ್ಟರ್ ಸೇವೆಗೆ ಸಬ್ಸಿಡಿ ಶುಲ್ಕ ಪಾವತಿ ಮಾಡೋಕೂ ಅಶಕ್ತರಾಗಿದ್ದರೆ ಅಂತವರಿಗೆ ಉಚಿತವಾಗಿಯೇ ಈ ಸೇವೆಯನ್ನ ನೀಡಲಾಗುವುದು ಅಂತಾ ಮಾಹಿತಿ ನೀಡಿದ್ರು.
ಬ್ಯಾಕ್ ಟು ವಿಲೇಜ್ ಎಂಬ ಕಾರ್ಯಕ್ರಮದ ಭಾಗವಾಗಿ ಗ್ರಾಮೀಣ ಪ್ರದೇಶಗಳಿಗೆ ಸಿನ್ಹಾ ಭೇಟಿ ನೀಡಿದ್ರು. ಚಳಿಗಾಲದ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶ ಜನರಿಗೆ ತೀವ್ರ ಸಂಕಷ್ಟ ಎದುರಾಗುತ್ತೆ. ಕೆಲವೊಂದು ಗುಡ್ಡಗಾಡು ಪ್ರದೇಶಗಳು ಸಂಪರ್ಕವನ್ನೇ ಕಳೆದುಕೊಂಡು ಬಿಡುತ್ತೆ. ಇಂತಹ ಸಂದರ್ಭದಲ್ಲಿ ಚಾಪರ್ ಸೇವೆ ನೀಡೋಕೆ ಸಾಧ್ಯವಾಗದೇ ಇದಲ್ಲಿ ರೋಗಿಗಳನ್ನ ಸಾಗಿಸಲು ವಿಮಾನಯಾನ ವ್ಯವಸ್ಥೆ ಮಾಡುತ್ತೇವೆ ಅಂತಾ ಹೇಳಿದ್ರು.
ಇನ್ನು ವಿಮಾನಯಾನ ಸೌಕರ್ಯಗಳನ್ನ ಬಳಸಿಕೊಳ್ಳಲು ಸಂಬಂಧಪಟ್ಟ ವ್ಯಾಪ್ತಿಯ ವೈದ್ಯಕೀಯ ಅಧಿಕಾರಿ, ಜಿಲ್ಲಾಧಿಕಾರಿಗಳಿಗೆ ರೋಗಿಯ ಸ್ಥಿತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಬೇಕು ಅಂತಾ ಹೇಳಿದ್ರು.