
ರಾಂಚಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ.
ಜಾರ್ಖಂಡ್ ಸರ್ಕಾರ ಆನ್ಲೈನ್ ತರಗತಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಆನ್ಲೈನ್ ಕ್ಲಾಸ್ ನಡೆಸಲು ಗಮನ ನೀಡುವ ಬದಲು ಪಾಠ ಪ್ರವಚನದ ಉದ್ದೇಶದಿಂದ ರಚಿಸಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋ ಸೆಂಡ್ ಮಾಡಿದ್ದಾರೆ.
ಬೊಕಾರೋ, ಲತೆಹರ್, ಗಿರಿಡಿಹ್ ಜಿಲ್ಲೆಗಳಿಗೆ ಸೇರಿದ ಮೂವರು ಶಿಕ್ಷಕರು ಹೀಗೆ ಅಶ್ಲೀಲ ಫೋಟೋ, ವಿಡಿಯೋ ಶೇರ್ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮೂರು ಜಿಲ್ಲೆಗಳ ಶಿಕ್ಷಣ ಅಧಿಕಾರಿಗಳಿಗೆ ಯೋಜನಾ ನಿರ್ದೇಶಕ ಉಮಾಶಂಕರ್ ಸಿಂಗ್ ಸೂಚನೆ ನೀಡಿದ್ದು, ಗ್ರೂಪ್ ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಸೆಂಡ್ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.