alex Certify ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ.

ಇದೇ ವೇಳೆ ನಗರ-ಪಟ್ಟಣ ಪ್ರದೇಶದಲ್ಲಿ ಶಾಲೆಗಳು ಆನ್ಲೈನ್ ತರಗತಿಗಳನ್ನು ಬೆಳೆಸುತ್ತಿದೆ, ಈ ನಡುವೆಯೂ ಇಂಟರ್ನೆಟ್ ಸೌಲಭ್ಯ ಇಲ್ಲದ, ಸ್ಮಾರ್ಟ್ ಫೋನ್, ಕಂಪ್ಯೂಟರ್ ಕೊರತೆಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಮಕ್ಕಳು ಎದುರಿಸುವ ಸಮಸ್ಯೆಯನ್ನು ಪರಿಹರಿಸಲು ಜಾರ್ಖಂಡ ಹೆಡ್ ಮಾಸ್ಟರ್ ಹೊಸ ವಿಧಾನ‌ ಕಂಡುಕೊಂಡಿದ್ದಾರೆ. ಬಂಕತಿ ಮಾಧ್ಯಮಿಕ ಶಾಲೆಯ ಹೆಡ್ ಮಾಸ್ಟರ್ ಕಿಶೋರ್ ಸಿಂಗ್ ಗಾಂಧಿ, ಏಪ್ರಿಲ್ 16ರಿಂದ ಪ್ರತಿದಿನ ಎರಡು ಗಂಟೆಗಳ ಕಾಲ ಧ್ವನಿವರ್ಧಕ ಬಳಸಿ ತರಗತಿ ನಡೆಸುತ್ತಿದ್ದಾರೆ.

ವಿವಿಧ ಸ್ಥಳಗಳಲ್ಲಿ ಮರ ಮತ್ತು ಗೋಡೆಗಳ ಮೇಲೆ ಧ್ವನಿವರ್ಧಕ ಅಳವಡಿಸಿದ್ದು, ಅದರ ಬಳಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಾರೆ. ಐದು ಶಿಕ್ಷಕರು ನಿರಂತರವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ.

ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 246 ಮಕ್ಕಳಿದ್ದು, 204 ಮಕ್ಕಳ ಬಳಿ ಮೊಬೈಲ್ ಫೋನ್ ಇಲ್ಲ.‌ ಹೀಗಾಗಿ ಲೌಡ್ ಸ್ಪೀಕರ್ ಬಳಸಿ ತರಗತಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...