
ರಾಜಸ್ಥಾನದ ಹಲಾವಾಡಾ ಜಿಲ್ಲೆಯ ಜವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಮದ್ಯ ವ್ಯಸನಿಗಳು ಮಗುವಿಗೆ ಬಿಯರ್ ಕುಡಿಸಿದ್ದಾರೆ. ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
ಆರು ವರ್ಷದ ಬಾಲಕನಿಗೆ ಬಿಯರ್ ಕುಡಿಸಲಾಗಿದೆ. ಇದನ್ನು ವಿಡಿಯೋ ಮಾಡಲಾಗಿದೆ. ಘಟನೆ ವೇಳೆ ಬಾಲಕನ ತಂದೆ-ತಾಯಿ ಸ್ಥಳದಲ್ಲಿರಲಿಲ್ಲ. ಈ ವಿಡಿಯೋವನ್ನು ಅವ್ರ ಮೊಬೈಲ್ ಗೂ ಕಳುಹಿಸಲಾಗಿದೆ. ಇದನ್ನು ನೋಡಿ ಅವರು ದಂಗಾಗಿದ್ದಾರೆ.
ವಿಡಿಯೋ ಪೊಲೀಸರಿಗೆ ವಾಟ್ಸಾಪ್ ಮೂಲಕ ತಲುಪಿದೆ. ಇದೇ ವೇಳೆ ಬಾಲಕನ ತಂದೆ ಕೂಡ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.