ರಾಖಿ ಹಬ್ಬ ಬಂತು ಎಂದರೆ ಪ್ರೀತಿ, ವಿಶ್ವಾಸದ ಹತ್ತು ಹಲವು ಮುಖಗಳು ತೆರೆದುಕೊಳ್ಳುತ್ತವೆ. ಆದರೆ ಇದರ ಜತೆಜತೆ ಅನಾಥ ಮಕ್ಕಳಿಗೆ ರಾಖಿ ಹಬ್ಬದ ಸಮಯದಲ್ಲಿ ಆಗುವ ಬೇಸರ ಅಷ್ಟಿಷ್ಟಲ್ಲ. ಆದರೆ ಇದನ್ನು ಅರಿಯದೇ ಆಭರಣದ ಅಂಗಡಿಯೊಂದು ಮಾಡಿರುವ ಜಾಹಿರಾತು ಇದೀಗ ಭಾರಿ ಟೀಕೆಗೆ ಕಾರಣವಾಗಿದೆ.
ಹೌದು, ವೈಭವ್ ಜ್ಯೂವೆಲ್ಸರ್ ಎನ್ನುವ ಸಂಸ್ಥೆ, ವಿಶೇಷ ರೀತಿಯ ಬಂಗಾರದ ರಾಖಿ ಹಾಗೂ ಇನ್ನಿತರೆ ದುಬಾರಿ ರಾಖಿಯನ್ನು ತಯಾರಿಸಿದೆ. ಈ ರಾಖಿಗಳಿಗೆ ಜಾಹಿರಾತು ನೀಡಲು ಹಲವು ನೆನಪುಗಳನ್ನು ನೆನಪಿಸಿದೆ. ಇದರಲ್ಲಿ ಸಾಮಾನ್ಯವಾಗಿ ಸಣ್ಣವರಿದ್ದಾಗ, “ನೀನು ದತ್ತು ಪಡೆದವನುʼ ಎನ್ನುವುದನ್ನು ಸೇರಿಸಿದೆ. ಆದರೆ ಈ ರೀತಿಯ ಜಾಹಿರಾತಿನಿಂದ ದತ್ತು ಪುತ್ರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಭಾರಿ ಬೇಸರವಾಗುತ್ತದೆ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ.
ಜುಲಿಯಾ ಚಂದ್ರಶೇಖರನ್ ಎನ್ನುವವರು ಈ ಜಾಹಿರಾತಿನ ವಿರುದ್ಧ change.org ನಲ್ಲಿ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ. ಜುಲಿಯಾ ಅವರು, ವೈಭವ್ ಆಭರಣದ ಅಂಗಡಿಯ ಈ ಜಾಹಿರಾತನ್ನು, ಲಾಭಕ್ಕಾಗಿ ಟೇಸ್ಟ್‌ಲೆಸ್ ಜಾಹಿರಾತು ಇದಾಗಿದೆ ಎಂದಿದ್ದಾರೆ. ನಿಜವಾದ ಸಹೋದರರಿಗೆ ಇದರಿಂದ ಬೇಸರವಾಗುವುದಿಲ್ಲ. ಆದರೆ ನಿಜವಾಗಿಯೂ ದತ್ತು ಪಡೆದುಕೊಂಡ ಸಹೋದರ, ಸಹೋದರಿಯರಿಗೆ ಇದರಿಂದ ಭಾರಿ ವ್ಯಥೆಯಾಗುತ್ತದೆ ಎಂದು ಆರೋಪಿಸಿದ್ದಾರೆ.