ಕೋವಿಡ್ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬುವ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸೈನಿಕರು ಫ್ರೆಂಟ್‌ಲೈನ್ ವಾರಿಯರ್ ಉದ್ದೇಶಿಸಿ ಹಾಡಿದ ಹಾಡು ಈಗ ನೆಟ್ಟಿಗರ ಹೃದಯ ಗೆದ್ದಿದೆ.
ಮಾರಣಾಂತಿಕ ಕೊರೊನಾ ವೈರಸ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರತಿಯೊಬ್ಬರನ್ನು ಕಾಡುತ್ತಿದೆ. ಬಹುಪಾಲು ಜನರು ಹೆಣಗಾಡುತ್ತಿರುವಾಗ ಮುಂಚೂಣಿ ವಾರಿಯರ್ ಎನಿಸಿಕೊಂಡ ವೈದ್ಯರು, ಆರೋಗ್ಯ ಸಿಬ್ಬಂದಿ ಪರಿಸ್ಥಿತಿ ಏನಾಗಿರಬೇಡ, ಊಹಿಸಿಕೊಳ್ಳುವುದಕ್ಕೂ ಅಸಾಧ್ಯ.
2 ತಿಂಗಳು ಕರುನಾಡಿಗೆ ಬೀಳುತ್ತಾ ಬೀಗ…?
ಇಂತಹ ಸಂಸಂದರ್ಭದಲ್ಲಿ ಅವರಲ್ಲಿ ಉತ್ಸಾಹ ತುಂಬುವ ಪ್ರೋತ್ಸಾಹ ನೀಡುವ ಚಟುವಟಿಕೆ ಮಾಡಿದಾಗ ಸಹಜವಾಗಿ ಅವರು ತಮ್ಮ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.
ಇದೇ ಕಾರಣಕ್ಕೆಕೆ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ನ ಸಬ್ ಇನ್ಸ್‌ಪೆಕ್ಟರ್ ರಾಜ್ ಕುಮಾರ್ ‘ಜಿಂದಗಿ ಹರ್ ಕದಮ್ ಏಕ್ ನಹಿ……ಜೀತ್ ಜಾಯೆಂಗೆ ಹಮ್…’ ಹಾಡನ್ನು ಹಾಡಿದ್ದು, ಅದು ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಸಹ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಹಾಡನ್ನು ನೋಡಿದ ನೆಟ್ಟಿಗರು ಕಾಮೆಂಟ್ ಹರಿಸಿದ್ದಾರೆ.