alex Certify ಜೆಇಇ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಇಇ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

JEE Main exams to begin from September 1; Know the important details here | India News | Zee News

ಈ ವರ್ಷದ ಜೆಇಇ(ಮೇನ್) ಪರೀಕ್ಷೆಗಳನ್ನು ಸೆಪ್ಟೆಂಬರ್ 1ರಿಂದ 6 ರವರೆಗೆ ಆಯೋಜಿಸಲಾಗಿದೆ. ಈ ಬಾರಿ ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯಬೇಕಿದ್ದು, ಕೋವಿಡ್-19 ಕಾರಣದಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು 570 ರಿಂದ 660 ಕ್ಕೆ ಹೆಚ್ಚಿಸಲಾಗಿದೆ.

ಸುಮಾರು 85 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಶಿಪ್ಟ್‌ಗಳನ್ನು 8 ರಿಂದ 12 ಕ್ಕೆ ಏರಿಸಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಆದೇಶಿಸಿದೆ. ಪ್ರತಿ ದಿನ ಎರಡು ಶಿಫ್ಟ್‌ನಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9 ರಿಂದ 12 ರವರೆಗೆ ಮೊದಲ ಶಿಫ್ಟ್ ಹಾಗೂ ಮಾಧ್ಯಾಹ್ನ 3 ರಿಂದ 6 ರವರೆಗೆ ಎರಡನೇ ಶಿಫ್ಟ್‌ನಲ್ಲಿ ಪರೀಕ್ಷೆ ನಡೆಯಲಿದೆ.

ದೇಶದ ಪ್ರತಿಷ್ಠಿತ ಎನ್‌ಐಟಿ ಹಾಗೂ ಐಐಟಿಗಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್ ಪದವಿ ಪ್ರವೇಶಕ್ಕಾಗಿ ಜೆಇಇ ಪರೀಕ್ಷೆಗಳನ್ನು ಎನ್‌ಟಿಎದಿಂದ ನಡೆಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...