
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಇವತ್ತು ಕಾರ್ಗಿಲ್ ವಿಜಯ ದಿವಸ್ ಆಚರಣೆಯ ದಿನವಾಗಿದೆ.
ಇಡೀ ದೇಶ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಿಸುತ್ತಿದೆ. ವೀರಯೋಧರನ್ನು ದೇಶಕ್ಕೆ ನೀಡಿದ ಎಲ್ಲಾ ತಾಯಂದಿರಿಗೂ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕಾರ್ಗಿಲ್ ಹೀರೋಗಳಿಗೆ ನಮನ ಸಲ್ಲಿಸಿದ ಮೋದಿ ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಸ್ಮರಿಸಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದೆ. ವಾಜಪೇಯಿ ಕೆಂಪುಕೋಟೆಯ ಮೇಲೆ ನಿಂತು ಮಾತನಾಡಿದ್ದು ನಿಜವಾಗುತ್ತಿದೆ. ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದು ತನ್ನ ಶಕ್ತಿಯನ್ನು ಪ್ರದರ್ಶಿಸಿತ್ತು. ನಮ್ಮ ವೀರಯೋಧರು ಪಾಕಿಸ್ತಾನವನ್ನು ಧ್ವಂಸ ಮಾಡಿದ್ದರು. ನನಗೆ ಕಾರ್ಗಿಲ್ ಗೆ ಹೋಗುವ ಅವಕಾಶ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಯೋಧರ ತ್ಯಾಗ, ಸಾಹಸದ ಮಾಹಿತಿ ತಿಳಿಯಲು ವೆಬ್ ಸೈಟ್ ಗಮನಿಸಿ, ಜನರಿಗೆ ನಮ್ಮ ಯೋಧರ ಸಾಧನೆಗಳ ಬಗ್ಗೆ ತಿಳಿಯಿರಿ, ತಿಳಿಸಿರಿ ಎಂದು ಯುವಕರಿಗೆ ಕರೆ ನೀಡಿದ್ದಾರೆ.