ಜೆಎಂಐ ತನ್ನ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಜನವರಿ 2ನೇ ವಾರದಿಂದ ಮುಕ್ತ ಪರೀಕ್ಷೆಗಳನ್ನ ನಡೆಸಲಿದೆ. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಫೈನಲ್ ಪರೀಕ್ಷೆ ನಡೆಸುವುದಕ್ಕೂ ಮುನ್ನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪೂರ್ವ ಸಿದ್ಧತಾ ಪರೀಕ್ಷೆಯೊಂದನ್ನ ನಡೆಸಲಿದೆ.
ಈ ಪರೀಕ್ಷೆಗಳನ್ನ ಆನ್ಲೈನ್ ಮೋಡ್ನಲ್ಲಿ ನಡೆಸುತ್ತೇವೆ ಎಂದು ಈ ಹಿಂದೆ ವಿಶ್ವ ವಿದ್ಯಾಲಯ ಘೋಷಣೆ ಮಾಡಿತ್ತು. ಆದರೆ ಆನ್ಲೈನ್ ಪರೀಕ್ಷೆಯ ತಾಂತ್ರಿಕ ದೋಷದ ಬಗ್ಗೆ ವಿದ್ಯಾರ್ಥಿಗಳು ಆತಂಕ ಹೊರಹಾಕಿದ ಕಾರಣ ವಿಶ್ವ ವಿದ್ಯಾಲಯ ಮುಕ್ತ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿತು. ಜೆಎಂಐ ಉಪಕುಲಪತಿ ನಜ್ಮಾ ಅಖ್ತರ್ ಸೆಮಿಸ್ಟರ್ ಪರೀಕ್ಷೆ ನಡೆಸುವ ಬಗ್ಗೆ ವಿದ್ಯಾರ್ಥಿಗಳಿಂದ ಸಲಹೆ ಪಡೆದಿದ್ದರು.
ಲಿಖಿತ ಪರೀಕ್ಷೆಗಳನ್ನ ಎದುರಿಸುವ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ jmi.ac.inನಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಪ್ರಾಯೋಗಿಕ ಪರೀಕ್ಷೆ ನಡೆಸುವ ಬಗ್ಗೆ ವಿಶ್ವ ವಿದ್ಯಾಲಯದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.