ಜಲಂಧರ್: 15 ವರ್ಷದ ಬಾಲಕಿ ಮೊಬೈಲ್ ಕಳ್ಳರ ಜತೆ ವೀರಾವೇಶದಿಂದ ಹೋರಾಡಿದ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಈಗ ಜಾಲತಾಣಗಳಲ್ಲಿ ಪ್ರಸಿದ್ಧವಾಗಿವೆ. ಆಕೆಯ ಶೌರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ರಾಜಸ್ತಾನದ ಜಲಂಧರ್ ನ ಕೂಲಿ ಕಾರ್ಮಿಕನೊಬ್ಬನ ಮಗಳು ಕುಸುಮಾ ಕುಮಾರಿ ಹೋರಾಟ ಮಾಡಿದಾಕೆ. ಇತ್ತೀಚೆಗೆ ಕೊರೊನಾ ಕಾರಣಕ್ಕೆ ಪ್ರಾರಂಭವಾದ ಆನ್ ಲೈನ್ ಪಾಠ ಕೇಳಲು ಆಕೆ ತನ್ನ ತಂದೆಯ ಕಷ್ಟದ ದುಡಿಮೆಯಿಂದ ಸ್ಮಾರ್ಟ್ ಫೋನ್ ಖರೀದಿಸಿದ್ದಳು.
ಬೀದಿಯಲ್ಲಿ ತೆರಳುವಾಗ ಬೈಕ್ ನಲ್ಲಿ ಬಂದ ಇಬ್ಬರು ಆಕೆಯ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೂ ಮುಂದಾಗಿದ್ದಾರೆ. ಆದರೂ ಫೋನ್ ಬಿಡದ ಆಕೆ ಇಬ್ಬರನ್ನೂ ಬೈಕ್ ನಿಂದ ಕೆಡವಿದ್ದಾಳೆ. ಆಕೆಯ ಕುಸ್ತಿಗೆ ಹೆದರಿದವರು ಕೊನೆಗೂ ಮೊಬೈಲ್ ಬಿಟ್ಟು ಪರಾರಿಯಾಗಿದ್ದರು. ಸಿಸಿ ಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.