ರಾಜಸ್ತಾನದ ಜೈಸಲ್ಮೇರ್ ನಲ್ಲಿರುವ ರಾಜಕುಮಾರಿ ರತ್ನವತಿ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರಿಗೆ ಭಾರತೀಯ ಖ್ಯಾತ ಉದ್ಯಮಿ ಹಾಗೂ ವಸ್ತ್ರವಿನ್ಯಾಸಕ ಸವ್ಯಸಾಚಿ ಮುಖರ್ಜಿ ಅವರು ಸಮವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದಾರೆ.
ಅಮೆರಿಕಾದ ಮೂಲದ ಸಿಐಟಿಟಿಎ ಸಂಘಟನೆ ಹಾಗೂ ರಾಜಕುಮಾರಿ ರತ್ನವತಿ ಬಾಲಕಿಯರ ಶಾಲೆ ಸಹಯೋಗದಲ್ಲಿ ಈ ಹೊಸ ವಿನ್ಯಾಸದಲ್ಲಿ ಸಮವಸ್ತ್ರ ಸಿದ್ಧಗೊಂಡಿದ್ದು, ಬ್ಲಾಕ್ ಪ್ರಿಂಟ್ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿರುವ ಈ ಉಡುಪು, ಅದರ ವಿನ್ಯಾಸ ಶೈಲಿ ಎಲ್ಲವೂ ಎಂಥವರನ್ನೂ ಸೆಳೆಯುವಂತಿದೆ.
ಎಲ್ಲಕ್ಕಿಂತ ಮಿಗಿಲಾಗಿ ರಾಜಸ್ತಾನದ ಸಾಂಪ್ರದಾಯಿಕ ಅಝ್ರಖ್ ಶೈಲಿ ವಿನ್ಯಾಸ ಮಿಳಿತಗೊಂಡಿದ್ದು, ಸವ್ಯಸಾಚಿಯ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.
ನಗುಮೊಗದೊಂದಿಗೆ ನಿಂತ ಐವರು ಹೆಣ್ಣುಮಕ್ಕಳು, ಸವ್ಯಸಾಚಿ ವಿನ್ಯಾಸದ ಕಡು ನೀಲಿ ಹಾಗೂ ಕೆಂಪು ಬಣ್ಣಗಳಿಂದ ಕೂಡಿದ ಸಮವಸ್ತ್ರದಲ್ಲಿ ಕಂಗೊಳಿಸುತ್ತಿದ್ದಾರೆ.
https://www.instagram.com/p/CGTpHVYBK7W/?utm_source=ig_web_copy_link
https://www.instagram.com/p/CGTpAWVBk7y/?utm_source=ig_web_copy_link