ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸೇವೆಗೆ ಹೆಚ್ಚು ಮಹತ್ವ ನೀಡುವ ಸಾಕಷ್ಟು ನಿಷ್ಟಾವಂತ ರಾಜಕಾರಣಿಗಳನ್ನ ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಸೇರಿರುವ ಜೈಪುರದ ಮೇಯರ್ ಡಾ. ಸೌಮ್ಯ ಗುರ್ಜರ್ ಎಂಬವರು ತಡರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸ ಮಾಡಿ ಮಾರನೇ ದಿನ ಬೆಳಗ್ಗೆ 5.15ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಪೆಟ್ರೋಲ್ – ಡಿಸೇಲ್ ಮಧ್ಯೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!
ಈ ಸಂಬಂಧ ಇಂದು ಬೆಳಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸೌಮ್ಯ, ಕಾಯಕವೇ ಕೈಲಾಸ ಎಂದು ಬರೆದುಕೊಂಡಿದ್ದಾರೆ. ಬುಧವಾರ ತಡರಾತ್ರಿಯವರೆಗೆ ನಡೆದಿದ್ದ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ತುಂಬು ಗರ್ಭಿಣಿ ಸೌಮ್ಯ ಮಧ್ಯರಾತ್ರಿ 12.30 ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೂ ಮುಂಜಾನೆ 5.15ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಫೆಬ್ರವರಿ 7ರಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಿದ್ದ ವೇಳೆ, ಗರ್ಭಿಣಿಯಾಗಿ ನನ್ನ ಕಾಳಜಿ ವಹಿಸೋದ್ರ ಜೊತೆಗೆ ಸಮಾಜ ಸೇವೆಯನ್ನ ಮಾಡ್ತಿರೋದು ನನಗೆ ಸವಾಲಿನ ಸಂಗತಿಯಾಗಿದೆ. ಇದರಿಂದ ನನಗೆ ಎಲ್ಲಾ ನೋವುಗಳು ಮರೆತು ಹೋಗಿಬಿಡುತ್ತೆ ಎಂದು ಹೇಳಿಕೊಂಡಿದ್ದರು.