
ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ. ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ.
ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೋಟು ಮರವೊಂದಕ್ಕೆ ಹಗ್ಗ ಕಟ್ಟಿಕೊಂಡು ಗಿರಗಿರನೆ ಸುತ್ತುವ ಮಕ್ಕಳ ಖುಷಿಗೆ ಪಾರವೇ ಇಲ್ಲ.
ಕೇವಲ 22 ಸೆಕೆಂಡಿನ ಈ ವಿಡಿಯೋ 20 ಸಾವಿರಕ್ಕೂ ಹೆಚ್ಚು ಜನರನ್ನು ಸೆಳೆದಿದ್ದು, ಹಲವರು ತಮ್ಮ ಬಾಲ್ಯದ ಜೀವನವನ್ನು ಸ್ಮರಿಸಿದ್ದಾರೆ.