ಈ ಪ್ರಾಣಿಗಳೇ ಹಾಗೆ. ತಮ್ಮ ಸುತ್ತಲಿನ ವಾತಾವರಣದಲ್ಲಿ ಲೀನವಾಗುವ ಮೂಲಕ ನೋಡುಗರ ಕಣ್ಣಿಗೆ ಅಷ್ಟು ಸುಲಭದಲ್ಲಿ ಕಾಣದಂತೆ ಆಗಿಬಿಡುತ್ತವೆ. ಇಂಥ ಸಂದರ್ಭದಲ್ಲಿ ತೆಗೆದ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಸ್ಪಾಟ್ ಮಾಡುವುದು ಬಹುತೇಕ ಅಸಾಧ್ಯ ಅನ್ನುವ ಮಟ್ಟಿಗೆ ಅವು camouflage ಆಗಿಬಿಟ್ಟಿರುತ್ತವೆ.
ಐಎಎಸ್ ಅಧಿಕಾರಿ ಡಾ. ಜೆ.ಕೆ. ಸೋನಿ ಎಂಬುವವರು ಇಂಥದ್ದೇ ಒಂದು ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿ ಅಲ್ಲಿರುವ ಪ್ರಾಣಿ ಯಾವುದೆಂದು ಗೆಸ್ ಮಾಡಲು ತಿಳಿಸಿದ್ದಾರೆ.
ಸರಿಯಾಗಿ ಆ ಜೀವಿಯ ತಲೆಯ ಮೇಲ್ಭಾಗ ಕಾಣುವಂತೆ ಕ್ರಾಪ್ ಮಾಡಲಾಗಿದ್ದ ಈ ಚಿತ್ರವನ್ನು ನೋಡಿ ಅಲ್ಲಿರುವುದು ಯಾವ ಜೀವಿಯೆಂದು ಕಂಡು ಹಿಡಿಯಲು ನೆಟ್ಟಗರು ಬಹಳಷ್ಟು ಪ್ರಯಾಸಪಟ್ಟರು. ಕಡೆಗೂ ಎಂಟು ಗಂಟೆಗಳ ಬಳಿಕ ಆ ಪ್ರಾಣಿ ಯಾವುದೆಂದು ತಿಳಿಸಿದ ಸೋನಿ, ಅದು ಮೊಸಳೆಯ ಚಿತ್ರವೆಂದು ಹೇಳಿದ್ದಾರೆ.
https://twitter.com/Jksoniias/status/1275955436756205568?ref_src=twsrc%5Etfw%7Ctwcamp%5Etweetembed%7Ctwterm%5E1275955436756205568%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fits-an-owl-its-a-bed-sheet-its-dirt-cropped-picture-of-a-deadly-predator-baffles-netizens%2F613765
https://twitter.com/Jksoniias/status/1276069905507315713?ref_src=twsrc%5Etfw%7Ctwcamp%5Etweetembed%7Ctwterm%5E1276069905507315713%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fits-an-owl-its-a-bed-sheet-its-dirt-cropped-picture-of-a-deadly-predator-baffles-netizens%2F613765