
ಐಟಿಬಿಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಸೈನಿಕರು ಸಂಪೂರ್ಣ ಮಂಜುಗಟ್ಟಿದ ಪ್ರದೇಶದಲ್ಲಿ ನಿಂತು ಭಾರತ ಮಾತೆಗೆ ಘೋಷಣೆಯನ್ನ ಕೂಗಿದ್ದಾರೆ. ಲಡಾಖ್ನಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದ್ದು ಇದರಲ್ಲಿ ಯೋಧನೊಬ್ಬ ದೇಶದ ಬಾವುಟ ಹಿಡಿದಿರೋದನ್ನೂ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೈನಿಕರಿಗೆ ಸಲಾಂ ಎಂದಿದ್ದಾರೆ.
ಹಿಮದ ನಡುವೆಯೇ ನಿಂತ ಭಾರತೀಯ ಯೋಧರು ದೇಶದ ಧ್ವಜವನ್ನ ಹಿಡಿದು ಭಾರತ್ ಮಾಜಿ ಜೈ ಹಾಗೂ ವಂದೇ ಮಾತರಂ ಎಂಬ ಘೋಷಣೆಯನ್ನ ಕೂಗಿದ್ದಾರೆ. -25 ಡಿಗ್ರಿ ಸೆಲ್ಸಿಯಸ್ನಲ್ಲಿ ಭಾರತದಲ್ಲಿ ಧ್ವಜವನ್ನ 17,000 ಅಡಿ ಎತ್ತರದ ಪ್ರದೇಶದಲ್ಲಿ ನಿಂತು ಯೋಧರು ಧ್ವಜ ಹಾರಿಸಿದ್ದಾರೆ.