ಬಂಡೆಗಳ ನಡುವೆ ಸಿಲುಕಿದ್ದವನ ರಕ್ಷಿಸಿದ ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸರು 12-01-2021 4:41PM IST / No Comments / Posted In: Latest News, India ಸಿಕ್ಕಿಂನ ಬಂಡೆಗಳ ನಡುವೆ ಸಿಲುಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಗಂಟೆಗಟ್ಟಲೇ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ಬಳಿಕ ವ್ಯಕ್ತಿಯನ್ನ ಸುರಕ್ಷಿತವಾಗಿ ಕರೆತರಲಾಯಿತು. ರಕ್ಷಣಾ ಕಾರ್ಯಾಚರಣೆಯ ಫೋಟೋಗಳನ್ನ ಐಟಿಬಿಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸಿಕ್ಕಿಂನ ಲಾಚುಂಗ್ ಬಳಿ 48ನೇ ಬೆಟಾಲಿಯನ್ ಐಟಿಬಿಪಿ ಈ ರಕ್ಷಣಾ ಕಾರ್ಯ ಕೈಗೊಂಡಿತ್ತು. ಬಂಡೆಗಳ ನಡುವಿನಿಂದ ಸೇಫಾಗಿ ಬಂದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ಐಟಿಬಿಪಿ ಟ್ವಿಟರ್ನಲ್ಲಿ ಬರೆದುಕೊಂಡಿದೆ. ನಮ್ಮ ರಕ್ಷಣಾ ತಂಡ ಉಜ್ವಲ್ ರೈ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನ ಸ್ಥಳೀಯರ ಸಹಾಯದಿಂದ ರಕ್ಷಿಸಿದೆ. ಹಾಗೂ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಐಟಿಪಿಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ರು. Rescue of a person from the middle of a cliff by 48th Battalion ITBP near Lachung, Sikkim yesterday. ITBP mountaineers after hours of efforts, rescued the person who had sustained minor injuries while stranded at the cliff. He was also administered the first aid by #Himveers. pic.twitter.com/jD6vtv4iZa — ITBP (@ITBP_official) January 10, 2021