ಬಿಹಾರದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ ಕರ್ತವ್ಯದಲ್ಲಿದ್ದ ಯೋಧರು ವೃದ್ಧ ಮತದಾರರನ್ನ ಮತಗಟ್ಟೆಗೆ ಎತ್ತಿಕೊಂಡು ಬರುವ ಮೂಲಕ ಮಾನವೀಯತೆ ತೋರಿದ್ದಾರೆ. ಇಂಡೋ ಟಿಬೆಟಿಯನ್ ಗಡಿಯಲ್ಲಿ ಈ ಘಟನೆ ನಡೆದಿದೆ.
ಕೊರೊನಾ ವೈರಸ್ಗೂ ಹೆದರದ ಬಿಹಾರದ ಜನತೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನ ಚಲಾಯಿಸಿದ್ರು. ಕತಿಹಾರ್ ಎಂಬಲ್ಲಿ ವೃದ್ಧ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನ ಯೋಧರೇ ಮತಗಟ್ಟೆಗೆ ಎತ್ತಿಕೊಂಡು ಬಂದು ಮತಚಲಾವಣೆಗೆ ಸಹಾಯ ಮಾಡಿದ್ದಾರೆ.
ಮುಜಾಫುರ ನಗರದ ಸಿರಿನಿಯಾ ಗ್ರಾಮದ ಜನರು ಮತದಾರರಿಗೆ ನೆರವಾಗಲೆಂದು ತಾತ್ಕಾಲಿಕ ಬ್ರಿಡ್ಜ್ ನಿರ್ಮಾಣ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಹಾರದ ಮೊದಲ ಹಂತದ ಚುನಾವಣೆಯಲ್ಲಿ 55.69 ಪ್ರತಿಶತದಷ್ಟು ಮತದಾನವಾಗಿದ್ರೆ ಎರಡನೇ ಹಂತದಲ್ಲಿ 53.51 ಶೇ. ವೋಟಿಂಗ್ ನಡೆದಿದೆ. ನವೆಂಬರ್ 10ರಂದು ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.