ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಡೆದ ದಾಳಿ ವಿಚಾರವಾಗಿ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ. ಈ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಅವ್ರು, ಮಮತಾ ಒಳ್ಳೆಯ ನಾಟಕ ಮಾಡಿದ್ದಾರೆ. ಆದರೆ ನಾಟಕದ ಕತೆ ಹೆಣೆದಿದ್ದು ಸರಿಯಾಗಿಲ್ಲ ಎಂದು ಕುಹಕವಾಡಿದ್ದಾರೆ.
ನಾಯಕರಿಗೆ ಝೆಡ್ ಪ್ಲಸ್ ಭದ್ರತೆ ನೀಡಿದ ವೇಳೆಯಲ್ಲಿ ಇಂತಹ ಘಟನೆ ನಡೆಯೋಕೆ ಹೇಗೆ ಸಾಧ್ಯ..? ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ ಅನ್ನೋದಕ್ಕೆ ಏನಾದರೂ ಸಾಕ್ಷಿ ಇದೆಯೇ..? ಇದೊಂದು ಶುದ್ಧ ರಾಜಕೀಯ ಹೈಡ್ರಾಮಾವಾಗಿದ್ದು ಈ ಸಂಬಂಧ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.