alex Certify ಸಂಸ್ಕೃತದಲ್ಲಿ ಮಾತ್ರ ಮಾತನಾಡುವ ದೇಶದ ಏಕೈಕ ಗ್ರಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸ್ಕೃತದಲ್ಲಿ ಮಾತ್ರ ಮಾತನಾಡುವ ದೇಶದ ಏಕೈಕ ಗ್ರಾಮ

ವಿವಿಧ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನುಳ್ಳ ದೇಶ ಭಾರತ. ಇಲ್ಲಿ ನೂರಾರು ಭಾಷೆಗಳಿವೆ, ಒಂದೊಂದು ಪ್ರದೇಶದಲ್ಲೂ ಒಂದೊಂದು ಭಾಷೆಗಳನ್ನು ಬಳಸಲಾಗುತ್ತದೆ. ಸಂಸ್ಕೃತ ಭಾಷೆಯ ಬಗೆಗಿನ ಸಮರ್ಪಣಾಭಾವದಿಂದ ಗ್ರಾಮವೊಂದು ಇಡೀ ದೇಶಕ್ಕೇ ಮಾದರಿಯಾಗಿದೆ. ಈ ಗ್ರಾಮದಲ್ಲಿ ಧರ್ಮ ಅಥವಾ ವೃತ್ತಿಯ ಭೇದವಿಲ್ಲದೆ ಎಲ್ಲರೂ ಸಂಸ್ಕೃತ ಮಾತನಾಡುತ್ತಾರೆ. ಹಳ್ಳಿಯ ಗೋಡೆಗಳ ಮೇಲೆ ಬರೆದಿರುವ ಸಂಸ್ಕೃತ ಶ್ಲೋಕಗಳು ಈ ಭಾಷೆಯ ಮೇಲಿನ ಅವರ ಆಳವಾದ ಪ್ರೀತಿಯನ್ನು ತೋರಿಸುತ್ತವೆ.

ಯಾವುದೇ ಸ್ಥಳದ ಪ್ರಮುಖ ಗುರುತು ಅಲ್ಲಿನ ಭಾಷೆ ಮತ್ತು ಉಪಭಾಷೆ. ಇಡೀ ಹಳ್ಳಿಯೇ ಸಂಸ್ಕೃತದಲ್ಲಿ ಮಾತನಾಡುವ ಈ ಗ್ರಾಮ ನಿಜಕ್ಕೂ ವಿಶೇಷವಾಗಿದೆ. ಗ್ರಾಮಸ್ಥರು, ರೈತರು, ಅಂಗಡಿ ಮಾಲೀಕರು, ಉದ್ಯೋಗಿಗಳು ಹೀಗೆ ಪ್ರತಿಯೊಬ್ಬರೂ ಇಲ್ಲಿ ಸಂಸ್ಕೃತ ಭಾಷೆಯನ್ನು ಬಳಸುತ್ತಾರೆ. ಈ ಗ್ರಾಮದ ಪ್ರತಿಯೊಂದು ಗೋಡೆಯೂ ಚಲಿಸುವ ಸಂಸ್ಕೃತ ಪಾಠಶಾಲೆಯಂತೆ ಕಾಣುತ್ತಿದೆ.

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿರುವ ಜಿರಿ ಎಂಬ ಗ್ರಾಮವಿದು. ಸುತ್ತಮುತ್ತಲಿನ ಹಳ್ಳಿಗಳು ತಮ್ಮ ಸ್ಥಳೀಯ ಉಪಭಾಷೆಗಳನ್ನು ಮಾತನಾಡುತ್ತಿದ್ದರೆ, ಜಿರಿ ಗ್ರಾಮಸ್ಥರು ಸಂಸ್ಕೃತವನ್ನು ಅಳವಡಿಸಿಕೊಂಡಿದ್ದಾರೆ.  2002ರಲ್ಲಿ ವಿಮಲಾ ತಿವಾರಿ ಅವರ ಪ್ರಯತ್ನದಿಂದ ಸಂಸ್ಕೃತ ಕಲಿಕೆಯು ಇಲ್ಲಿ ಪ್ರಾರಂಭವಾಯಿತು.

ವಿಮಲಾ ಅವರ ಪ್ರಯತ್ನ ಇಡೀ ಹಳ್ಳಿಯನ್ನು ಪರಿವರ್ತಿಸುವುದರ ಜೊತೆಗೆ ಪ್ರಪಂಚದ ಅತ್ಯಂತ ಹಳೆಯ ಭಾಷೆಯ ಬಗ್ಗೆ ಜಾಗೃತಿ ಮೂಡಿಸಿತು. ಈ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನರು ವಾಸಿಸುತ್ತಿದ್ದಾರೆ. ಗ್ರಾಮದ ಎಲ್ಲ ಜನರು ಸಂಸ್ಕೃತ ಭಾಷೆಯನ್ನು ಬಳಸುತ್ತಾರೆ.

ಇಲ್ಲಿ ಮನೆಗಳ ಹೆಸರನ್ನೂ ಸಂಸ್ಕೃತದಲ್ಲಿ ಇಡಲಾಗಿದೆ. ಶಾಲೆಗಳಲ್ಲಿ ಮಾತ್ರವಲ್ಲದೆ ದೇವಾಲಯಗಳಲ್ಲಿಯೂ ಮಕ್ಕಳಿಗೆ ಸಂಸ್ಕೃತವನ್ನು ಕಲಿಸಲಾಗುತ್ತದೆ. ಮದುವೆಗಳಲ್ಲಿ ಸಂಸ್ಕೃತ ಗೀತೆಗಳನ್ನು ಹಾಡಲಾಗುತ್ತದೆ.

ಮಧ್ಯಪ್ರದೇಶದ ಜಿರಿ ಗ್ರಾಮದಂತೆ ಕರ್ನಾಟಕದ ಮತ್ತೂರು ಕೂಡ ಸಂಸ್ಕೃತ ಭಾಷೆಗೆ ಮೀಸಲಾದ ಗ್ರಾಮವಾಗಿದೆ. ಈ ಎರಡೂ ಗ್ರಾಮಗಳಲ್ಲಿ ವಾಸಿಸುವ ಜನರು ತಮ್ಮ ದಿನಚರಿಯಲ್ಲಿ ಸಂಸ್ಕೃತವನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡದ ಗ್ರಾಮವಾಗಿದ್ದರೂ ಮತ್ತೂರು ಸಂಸ್ಕೃತವನ್ನು ಬಳಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...