ಕೇರಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಐಎಸ್ಐಎಸ್ ಭಯೋತ್ಪಾದಕರು ತಳವೂರಿದ್ದಾರೆಂದು ಭಯೋತ್ಪಾದನೆ ಕುರಿತ ವಿಶ್ವಸಂಸ್ಥೆಯ ವರದಿಯು ಎಚ್ಚರಿಸಿದೆ. ಅಲ್ ಖೈದಾ ಭಯೋತ್ಪಾದಕ ಸಂಘಟನೆಯು ಈ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ಸಂಘಟನೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ 150 ರಿಂದ 200 ಭಯೋತ್ಪಾದಕರು ಇದ್ದಾರೆ ಎಂದು ಹೇಳಲಾಗಿದೆ.
ಒಸಾಮಾ ಮೆಹಮೂದ್ ಪ್ರಸ್ತುತ ತಂಡದ ನಾಯಕನಾಗಿದ್ದಾನೆ. ಅಸಿಮ್ ಉಮರ್ ಜಾಗವನ್ನು ಪಡೆದಿದ್ದು, ಮಾಜಿ ಮಾರ್ಗದರ್ಶಕರ ಸಾವಿನ ಪ್ರತಿಕಾರ ತೀರಿಸಿಕೊಳ್ಳಲು ಹೊಂಚು ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಕೇರಳ ಮತ್ತು ಕರ್ನಾಟಕ ರಾಜ್ಯಗಳು ಗಮನಾರ್ಹ ಸಂಖ್ಯೆಯ ಐಎಸ್ಐಎಸ್ ಸದಸ್ಯರನ್ನು ಹೊಂದಿವೆ ಎನ್ನಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು ಭಾರತದಲ್ಲಿ ಹೊಸ ಪ್ರಾಂತ್ಯ ವನ್ನು ಸ್ಥಾಪಿಸಿದೆ ಎಂದು ಹೇಳಿಕೊಂಡಿದೆ. ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಮುಖಾಮುಖಿಯ ನಂತರ ಇದು ಒಂದು ವಿಶಿಷ್ಟ ಘೋಷಣೆಯಾಗಿದೆ.